Mysore
22
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಬಹುರೂಪಿ ಚಲನಚಿತ್ರೋತ್ಸವ : ನೀರಸ ಪ್ರತಿಕ್ರಿಯೆ

ಮೈಸೂರು : ಬಹುರೂಪಿ ಚಲನಚಿತ್ರೋತ್ಸವಕ್ಕೆ ಮೂರನೇ ದಿನವೂ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶ್ರೀರಂಗ ರಂಗಮಂದಿರದಲ್ಲಿ ಭಾನುವಾರ ಪ್ರದರ್ಶನಗೊಂಡ ಮೂರು ಸಿನಿಮಾಗಳ ಪೈಕಿ ಮಧ್ಯಾಹ್ನ ೨ ರಿಂದ ೪.೩೦ರವೆರೆಗೆ ಪ್ರದರ್ಶನಗೊಂಡು ಮಲಯಾಳಂ ಭಾಷೆಯ ಮಹೇಶ್ ನಾರಾಯಣ್ ನಿರ್ದೇಶನದ ಟೇಕ್ ಆಫ್ ಸಿನಿಮಾಗೆ ಮಾಮೂಲಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಜನರು ಕಂಡು ಬಂದರು. ಆದರೂ, ಆಸನಗಳು ಭರ್ತಿಯಾಗಿರಲಿಲ್ಲ.

ಬೆಳಿಗ್ಗೆ 10.30 ಕ್ಕೆ ಪ್ರದರ್ಶನಗೊಂಡ ಆದಿತ್ಯ ರಾನಡೆ ನಿರ್ದೇಶನದ ರಾಂಚಿ ಪಖಾರ್ ಎಂಬ 30  ನಿಮಿಷಗಳ ಹಿಂದಿ ಸಿನಿಮಾ ಮತ್ತು ಮಧ್ಯಾಹ್ನ ೧೨ಕ್ಕೆ ಪ್ರದರ್ಶನಗೊಂಡ ಡೆರಿಕ್ ಡೊನೆನ್ ನಿರ್ದೇಶನದ ದಿ ಪ್ರೈಸ್ ಆಫ್ ಫ್ರೀ ಸಿನಿಮಾ ವೀಕ್ಷಣೆಗೆ ಐದಾರು ಮಂದಿ ವೀಕ್ಷಕರಷ್ಟೆ ಇದ್ದರು. ಇನ್ನು ಸಿನಿಮಾ ಕುರಿತ ಚರ್ಚೆಗಳು ಕೂಡ ಕಾಣಲಿಲ್ಲ. ಭಾನುವಾರವಾದರೂ, ಮಳೆಯ ಕಾರಣದಿಂದ ಜನರು ಬರಲಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!