Mysore
27
overcast clouds

Social Media

ಮಂಗಳವಾರ, 07 ಜುಲೈ 2026
Light
Dark

ಕಬಿನಿ ಹಿನ್ನೀರಿನಲ್ಲಿ 4 ಮರಿಗಳ ಜತೆ ಹುಲಿ ದರ್ಶನ; ಪ್ರವಾಸಿಗರು ಫುಲ್ ಖುಷ್

ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಶನಿವಾರ ಬೆಳಿಗ್ಗೆ ವನ್ಯಜೀವಿ ಸಫಾರಿಯಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿಗಳ ದರ್ಶನವಾಗಿದೆ.

ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಎರಡು ಹೆಣ್ಣು ಹುಲಿಗಳು ತಲಾ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿ ಎಂದು ಅಂತರಸಂತೆ ವನ್ಯಜೀವಿ ವಲುಂ ಅರಣ್ಯ ಅಧಿಕಾರಿ ಎಸ್.ಎಸ್. ಸಿದ್ದರಾಜು ಹೇಳಿದ್ದಾರೆ.
ಕಬಿನಿ ಹಿನ್ನೀರಿನ (ಬ್ಯಾಕ್ ವಾಟರ್ ಫೀಮೇಲ್) ವ್ಯಾಪ್ತಿಯ ಹೆಣ್ಣು ಹುಲಿಯು ನಾಲ್ಕು ಮರಿಗಳಿಗೆ ಆರು ತಿಂಗಳ ಹಿಂದೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಟೈಗರ್ ಟ್ಯಾಂಕ್ ಗಂಡುಹುಲಿ ಜೋಡಿಯಾಗಿದೆ.
ತಾರಕ ಹಿನ್ನೀರಿನ ವ್ಯಾಪ್ತಿಯ ಹೆಣ್ಣು ಹುಲಿಯು (ರಸೂಲ್ ಲೈನ್ ಫೀಮೇಲ್) ನಾಲ್ಕು ಮರಿಗಳಿಗೆ 11 ತಿಂಗಳ ಹಿಂದೆ ಜನ್ಮ ನೀಡಿದೆ. ಈ ಹೆಣ್ಣು ಹುಲಿಗೆ ಸೀಳುತುಟಿ ಎಂಬ ಗಂಡುಹುಲಿ ಜೋಡಿಯಾಗಿದೆ.
ಕಳೆದ ಅಕ್ಟೋಬರ್ 12ರಂದು ಕಬಿನಿ ಹಿನ್ನೀರಿನ (ಬ್ಯಾಕ್ ವಾಟರ್ ಫೀಮೇಲ್) ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯು ಮರಿಗಳೊಂದಿಗೆ ಒಮ್ಮೆ ದರ್ಶನ ನೀಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!