Mysore
26
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗುಜರಾತ್ ಕಮಲಮಯ ಹಿಮದಲ್ಲಿ ಕೈ ಕಮಾಲ್‌

ಬಿಜೆಪಿಗೆ ಸಿಹಿ-ಕಹಿ; ಕಾಂಗ್ರೆಸ್‌ಗೆ ಬೂಸ್ಟರ್

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಗೆ ತವರೂರು ಗುಜರಾತ್‌ನಲ್ಲಿ ಬಿಜೆಪಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಪ್ರಚಂಡ ಗೆಲುವು ಸಾಧಿಸಿದೆ. ಆದರೆ ಹಿಮಾಚಲಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಕಮಾಲ್ ಮಾಡಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದಿಗೆ ಹಿಡಿದಿದೆ.
ಗುಜರಾತ್‌ನ ಒಟ್ಟು ೧೮೨ ಸ್ಥಾನಗಳ ಪೈಕಿ ಬಿಜೆಪಿ ೧೫೬ ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಕೇವಲ ೧೭ ಸ್ಥಾನಗಳಲ್ಲಿ ಜಯಗಳಿಸಿ ಹೀನಾಯ ಸೋಲು ಅನುಭವಿಸಿದೆ. ಆ ಪಕ್ಷಕ್ಕೆ ವಿಧಾನಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಸಿಗುವುದಿಲ್ಲ. ಮೊದಲ ಬಾರಿಗೆ ಚುನಾವಣಾ ರಂಗ ಪ್ರವೇಶ ಮಾಡಿ ಭಾರೀ ಸದ್ದು ಮಾಡಿದ್ದ ಅಮ್ ಆದ್ಮಿ ಪಕ್ಷವು ನಿರೀಕ್ಷೆಯಂತೆ ೪ ಸ್ಥಾನಗಳಲ್ಲಿ ಗೆಲುವು ಕಂಡಿದೆ.
ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಬಿಜೆಪಿ ಗೆಲುವಿಗೆ ಎಲ್ಲಿಯೂ ಅಡ್ಡಿಯಾಗಿಲ್ಲ. ಚುನಾವಣೆಗೂ ಮುನ್ನ ಅನುಸರಿಸಿದ ರಣತಂತ್ರ, ವ್ಯವಸ್ಥಿತ ಪ್ರಚಾರ, ಗುಜರಾತ್ ಅಸ್ಮಿತೆ, ಡಬಲ್ ಇಂಜಿನ್ ಸರ್ಕಾರದ ಮಹತ್ವ, ಹಿಂದುತ್ವ ಅಜೆಂಡಾ ಈ ಎಲ್ಲ ಅಂಶಗಳು ಕಮಲವನ್ನು ಅರಳಿಸಿದೆ.
೨೦೧೭ರಲ್ಲಿ ಬಿಜೆಪಿಗೆ ಭಾರೀ ಪೈಪೋಟಿ ನೀಡಿದ್ದ ಕಾಂಗ್ರೆಸ್ ಈ ಬಾರಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಹೀನಾಯ ಸೋಲು ಕಂಡಿದೆ. ವಿಧಾನಸಭೆ ಚುನಾವಣೆಗೂ ಮುನ್ನವೇ ಪ್ರಮುಖ ನಾಯಕರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಾಟೀಲ್ ಸೇರಿದಂತೆ ಹಲವು ನಾಯಕರ ನಿರ್ಗಮನದಿಂದ ಶಸ್ತ್ರ ತ್ಯಾಗ ಮಾಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನವಿರೋಧಿ ನೀತಿಗಳು, ಕೋಮು ಧ್ರುವೀಕರಣ, ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ, ತಮ್ಮನ್ನು ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇತ್ತು. ಮೋದಿ ಮತ್ತು ಅಮಿತ್ ಶಾ ಜೋಡಿ ಮುಂದೆ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ.
ಹಿಮಾಚಲದಲ್ಲಿ ಬಿಜೆಪಿಗೆ ಮುಖಭಂಗ ತೀವ್ರ ಕುತೂಹಲ ಮೂಡಿಸಿದ್ದ ಗಿರಿಶಿಖರಗಳ ನಾಡು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪುಟಿದೆದ್ದು ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿ ಮಾಡಿ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಜಯರಾಮ್ ಠಾಕೂರ್ ಅವರ ಆಡಳಿತ ವಿರೋಧಿ ಅಲೆಗೆ ಬಿಜೆಪಿ ೨ನೇ ಸ್ಥಾನಕ್ಕೆ ಕುಸಿದು ಮುಖಭಂಗ ಅನುಭವಿಸಿದೆ. ೬೮ ಸ್ಥಾನಗಳ ಪೈಕಿ ಕಾಂಗ್ರೆಸ್ ೩೯ ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿದೆ.
ಆಡಳಿತದಲ್ಲಿದ್ದ ಬಿಜೆಪಿ ೨೬ ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಕಾಂಗ್ರೆಸ್ ೩೯ ಸ್ಥಾನಗಳನ್ನು ಪಡೆದಿದೆ. ಇತರರು ೩ ಸ್ಥಾನಗಳಲ್ಲಿ ಜಯಗಳಿಸಿದ್ದು, ಎಎಪಿ ಸಾಧನೆ ಶೂನ್ಯವಾಗಿದೆ. ಕಳೆದ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ೪೪, ಕಾಂಗ್ರೆಸ್ ೨೧ ಮತ್ತು ಇತರೆ ೩ ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಕಳೆದ ೩೭ ವರ್ಷಗಳಿಂದ ಹಿಮಾಚಲಪ್ರದೇಶದಲ್ಲಿ ಒಂದು ಬಾರಿ ಆಡಳಿತ ನಡೆಸಿದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸಾಬೀತಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಸರಣಿ ಚುನಾವಣಾ ಸಮಾವೇಶಗಳನ್ನು ನಡೆಸಿತ್ತು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಪಕ್ಷದ ಬಹುತೇಕ ಪ್ರಚಾರ ಸಮಾವೇಶಗಳು ನಡೆದಿವೆ. ಬಿಜೆಪಿ ಮುಷ್ಟಿಯಿಂದ ರಾಜ್ಯವನ್ನು ಪಡೆದುಕೊಳ್ಳುವುದು ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.

ಗುಜರಾತ್ ಸ್ಥಾನ ೧೮೨ ಬಹುಮತಕ್ಕೆ ೯೨
ಪಕ್ಷ ೨೦೨೨ ೨೦೧೭
ಬಿಜೆಪಿ ೧೫೬ ೯೯ +೫೮
ಕಾಂಗ್ರೆಸ್ ೧೭ ೭೭ -೬೦
ಎಎಪಿ ೦೫ ೦೦ -೦೦
ಪಕ್ಷೇತರ ೦೩ ೦೬ -೦೩

ಹಿಮಾಚಲ ಪ್ರದೇಶ ಸ್ಥಾನ ೬೮ ಬಹುಮತಕ್ಕೆ ೩೫
ಪಕ್ಷ ೨೦೨೨ ೨೦೧೭
ಬಿಜೆಪಿ ೨೬ ೪೪ -೧೮
ಕಾಂಗ್ರೆಸ್ ೩೯ ೨೧ +೧೮
ಎಎಪಿ ೦೦ ೦೦ -೦೦
ಪಕ್ಷೇತರ ೦೩ ೦೬ -೦೩

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ