ಮಡಿಕೇರಿ: ಹಿಂದೂ ಧಾರ್ಮಿಕ ಸಂಸ್ಥೆ ಧರ್ಮದಾಯ ದತ್ತಿಗಳ ಇಲಾಖೆ, ಓಂಕಾರೇಶ್ವರ ದೇವಾಲಯ, ಮಡಿಕೇರಿ ಕೊಡವ ಸಮಾಜ, ಪಾಂಡೀರ ಕುಟುಂಬದ ಆಶ್ರಯದಲ್ಲಿ ನಗರದ ಕೋಟೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹುತ್ತರಿ ಕೋಲಾಟ್ ಎಲ್ಲರ ಗಮನ ಸೆಳೆಯಿತು.
ಸಾಂಪ್ರಾದಾಯಿಕ ನೃತ್ಯಗಳಾದ ಕೋಲಾಟ್, ಉಮ್ಮತಾಟ್, ಬೊಳಕಾಟ್ ಅನ್ನು ಪಾಂಡೀರ ಕುಟುಂಬದ ಸದಸ್ಯರು ಪ್ರದರ್ಶಿಸಿ ದರು. ಜತೆಗೆ ಮಡಿಕೇರಿ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಎಲ್ಲರು ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಖುಷಿಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಚಾಲನೆ ನೀಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಪಾಂಡೀರ ಕುಟಂಬದ ಪಟ್ಟೇದಾರ ಮೇದಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿಕಾಳಪ್ಪ, ಪ್ರಮುಖರಾದ ಮುತ್ತಣ್ಣ ಇನ್ನಿತರರು ಉಪಸ್ಥಿತರಿದ್ದರು.