Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನಾಳೆ ಕಬಿನಿ ರೈತರ ಸಮಸ್ಯೆ ಪರಿಹಾರ ಸಭೆ

ಬೆಂಗಳೂರು: ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿ ಜಮೀನು ಕಳೆದುಕೊಂಡವರ ಸಮಸ್ಯೆ ಪರಿಹಾರಕ್ಕೆ ನಾಳೆ ಶುಕ್ರವಾರ ಸಭೆ ನಡೆಸಲಾಗುವುದು. ಹಾಗೆೆಯೇ ಶೇಂದಿ ನಿಷೇಧ ಮಾಡಿರುವುದರಿಂದ ಈಚಲು ಬೆಳೆ ಬೆಳೆದಿದ್ದ ರೈತರ ಸಮಸ್ಯೆ ಪರಿಹಾರಕ್ಕೂ ಸಭೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇದು ಹಲವಾರು ವರ್ಷಗಳ ಸಮಸ್ಯೆಯಾಗಿದ್ದು, ಇತ್ತೀಚೆಗೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾಗ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದನ್ನು ಪರಿಹರಿಸಲು ಸಭೆ ಕರೆಯಲಾಗಿದೆ ಎಂದರು.
ಕರ್ನಾಟಕ ಆರ್ಯಾವೈಶ್ಯ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ೨೧ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ೨೦೧೩ ಫಲಾನುಭವಿಗಳಿಗೆ ಸಾಲ ನೀಡಿ ಶೇ.೧೦೦ರಷ್ಟು ಪ್ರಗತಿ ಸಾಸಲಾಗಿದೆ. ಸ್ವಯಂ ಉದ್ಯೋಗ, ನೇರಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಕಂದಾಯ ಸಚಿವಾಲಯದಲ್ಲಿ ಆರ್ಯಾ ವೈಶ್ಯ ಆಹಾರವಾಹಿನಿ ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿ ಗರಿಷ್ಠ ೨ ಲಕ್ಷ ರೂ.ವರೆಗೂ ಸಹಾಯಧನ ಮಂಜೂರು ಮಾಡಲಿದ್ದು, ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ ೨೦ ಕಡೆಯ ದಿನವಾಗಿದೆ. ನಿಗಮವು ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿಇಒ ಲೈವ್ ಡಾಶ್‌ಬೋರ್ಡ್ ಸಿದ್ದಪಡಿಸಿದ್ದು, ಡಾಶ್‌ಬೋರ್ಡ್‌ನಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಸಿಇಒಗಳು ಅಭ್ಯರ್ಥಿಗಳ ವಿವರವನ್ನು ವೀಕ್ಷಿಸಬಹುದು ಎಂದರು.
ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೆಚ್ಚುವರಿಗೆ ೧೦ ಕೋಟಿ ರೂ.ಗಳ ಅನುದಾನವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ಗೀತಾಶ್ರೀ ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ