Mysore
28
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಬಸವನಗಿರಿ ಹಾಡಿಗೆ ಹರ್ಷ ಚೌಹಾಣ್‌ ಭೇಟಿ

ಎಚ್.ಡಿ.ಕೋಟೆ: ತಾಲ್ಲೂಕಿನ ಬಸವನಗಿರಿ ಆದಿವಾಸಿ ಹಾಡಿಗೆ ಪರಿಶಿಷ್ಟ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹರ್ಷ ಚೌಹಾಣ್‌  ಭೇಟಿ ನೀಡಿ ಆದಿವಾಸಿ ಸಂಘಟನೆ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿದರು.

ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಸರಿಯಾಗಿ ಆಗಿಲ್ಲ. ಹೈ ಕೋರ್ಟ್ ಆದೇಶ ಪಾಲನೆ ಆಗುತ್ತಿಲ್ಲ, ೩೪೧೮ ಮಂದಿಯನ್ನು ಕಾಡಿನಿಂದ ಹೊರಹಾಕಿದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಲ್ಲ. ಈ ಸಂಬಂಧ ಆಯೋಗದ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆದಿವಾಸಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಆದಿವಾಸಿ ಮುಖಂಡ ವಿಠಲ್, ಗಣೇಶ್, ಪಿ.ಕೆ .ರಾಮು, ಗಿರಿಜಾ, ಕಾಲಕಲ್ಕರ್, ವಿಜಯ್‌ ಕುಮಾರ್, ಕುಮಾರ್, ಡಿ.ಎಂ.ಬಸವರಾಜ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!