Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ನಾಳೆಯಿಂದ ಲೈಂಗಿಕ ಅಲ್ಪಸಂಖ್ಯಾತರ ತಂಡದಿಂದ ನಾಟಕ ಪ್ರದರ್ಶನ

ಮೈಸೂರು: ರಾಮನಗರ ಜಿಲ್ಲೆ ಹಾರೋಹಳ್ಳಿಯ ಅರ್ಧ ನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್ ವತಿಯಿಂದ ಡಿ.6ರಿಂದ ಡಿ.೧೧ರವರೆಗೆ ನಗರದ ಪುರಭವನದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಸ್ವಪ್ನ ನಾಗರಾಜ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.6ರಂದು ರೇಣುಕಾಚಾರ್ಯ ಗುರುಮೂರ್ತಿ ತಂಡದಿಂದ ಕುರುಕ್ಷೇತ್ರ, ಡಿ.7ರಂದು ಪಂಡಿತ್ ರಾಜಶೇಖರ ತಂಡದಿಂದ ದಕ್ಷಯಜ್ಞ, ಡಿ.8ರಂದು ಡಾ.ಟಿ.ಎಲ್.ರಮೇಶ್ ತಂಡದಿಂದ ಶ್ರೀಕೃಷ್ಣ ಸಂಧಾನ ಮತ್ತು ಡಿ.೯ರಂದು ಮೂರ್ತಿ ತಂಡದಿಂದ ದಕ್ಷಯಜ್ಞ, ಡಿ.11ರಂದು ನಂದೀಶ್ ಮತ್ತು ತಂಡದಿಂದ ಭಕ್ತ ಪ್ರಹ್ಲಾದ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ತಂಡ ಲೈಂಗಿಕ ಅಲ್ಪಸಂಖ್ಯಾತರ ತಂಡವಾಗಿದೆ. ಭಿಕ್ಷಾಟನೆ ಸರಿಯಲ್ಲವೆಂದು ನಾಟಕ ಪ್ರದರ್ಶನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಟಕ ಪ್ರದರ್ಶನಕ್ಕೆ ನೀಡುವ ಸಹಾಯಧನವನ್ನು ನಾಟಕ ಪ್ರದರ್ಶನದ ನಂತರ ನೀಡುವ ನಿಯಮ ಸರಿಯಲ್ಲ. ಮೊದಲಿನಂತಯೇ ನಾಟಕ ಪ್ರದರ್ಶನಕ್ಕೂ ಮೊದಲೇ ಸಹಾಯಧನ ನೀಡಬೇಕೆಂದು ಮನವಿ ಮಾಡಿದರು. ಮಹೇಶ್ವರಿ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!