ಹನೂರು: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ವಿಧಾನಗಳೊಂದಿಗೆ ಜರುಗಿತು.
ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಹಾಗೂ ಒಳಾಂಗಣದಲ್ಲಿ ವಿವಿಧ ಬಗೆಯ ಪುಷ್ಪಗಳಿಂದ ಹಾಗೂ ತಳಿರು ತೋರಣಗಳಿಂದ ಸಿಂಗರಗೊಳಿಸಲಾಗಿದೆ. ವಿಶೇಷವಾಗಿ ಆಂಜನೇಯ ಸ್ವಾಮಿಗೆ 5 ಕೆಜಿ ಬೆಣ್ಣೆಯಿಂದ ಅಲಂಕರಿಸಿ,ಮಹಾಮಂಗಳಾರತಿ ವಿಶೇಷ ಪೂಜಾ ಜರುಗಿತು.

ಅನ್ನ ಸಂತರ್ಪಣೆ : ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನಂತರ ನೆರದಿದ್ದ ಭಕ್ತರಿಗೆ ವಾಯುಪುತ್ರ ಮೊಬೈಲ್ ಅಂಗಡಿ ಮಾಲೀಕರಾದ ಪ್ರಕಾಶ್ ಕುಟುಂಬದವರು ನೆರೆದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಹನುಮ ಜಯಂತಿಗೆ ಪ್ರಯುಕ್ತ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.





