Mysore
18
clear sky

Social Media

ಗುರುವಾರ, 09 ಜನವರಿ 2025
Light
Dark

ಭಾವಿ ಪತ್ನಿ ದಿವ್ಯಾ ಉರುಡುಗಗೆ ಅರವಿಂದ್‌ ಪ್ರೀತಿಯ ಸಂದೇಶ

ಬಿಗ್‌ ಬಾಸ್‌ ಮನೆಯಲ್ಲಿ ಸತತವಾಗಿ  10 ವಾರಗಳ ಕಾಲ  ಆಟವನ್ನು ಪೂರ್ಣಗೊಳಿಸಿರುವ ದಿವ್ಯಾ ಉರುಡುಗ ಅವರಿಗೆ ಭಾವಿ ಪತ್ನಿ ಅರವಿಂದ್‌ ಕೆ ಪಿ ಅವರು ಪ್ರೀತಿಯ ಸಂದೇಶವನ್ನು ರವಾನಿಸಿದ್ದಾರೆ.
ಹೌದು,
ಸೀರಿಯಲ್, ಸಿನಿಮಾ, ಟಿವಿ ಶೋ ಬಿಗ್ ಬಾಸ್ ಎಲ್ಲದರಲ್ಲೂ ಸೈ ಎನಿಸಿಕೊಂಡವರು ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಪ್ರವಿಣರ ಸಾಲಿನಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇದರ ಮಧ್ಯೆ ದಿವ್ಯಾಗೆ ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಆಡು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅರವಿಂದ್ ಬರೆದುಕೊಂಡಿದ್ದಾರೆ.

ʻಮರಿಹುಳುನ ಕೈಬಿಟ್ಟರೆ, ಅದು ಎಂದಿಗೂ ಸುಂದರವಾದ ಚಿಟ್ಟೆಯಾಗುವುದಿಲ್ಲ ನೆವರ್ ಗಿವ್ ಅಪ್ʼ ಎಂದು ಅರವಿಂದ್, ದಿವ್ಯಾ ಉರುಡುಗಗೆ ಬೆಂಬಲ ನೀಡಿದ್ದಾರೆ. ಈಗಾಗಲೇ 10 ವಾರಗಳನ್ನ ದೊಡ್ಮನೆಯಲ್ಲಿ ಪೂರೈಸಿರುವ ದಿವ್ಯಾ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ.
ಇತ್ತೀಚೆಗೆ ಅರವಿಂದ್, ದಿವ್ಯಾ ಜೊತೆಗಿನ ಲವ್ ಲೈಫ್ ಬಗ್ಗೆ ರಿವೀಲ್ ಮಾಡಿದ್ದರು. ಇಬ್ಬರು ಎಂಗೇಜ್ ಆಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 8ರ ಇಬ್ಬರ ಪರಿಚಯ, ಪ್ರೀತಿಗೆ ತಿರುಗಿದೆ. ಬಿಗ್‌ ಬಾಸ್ ಶೋ ಬಳಿಕ ಹಸೆಮಣೆ ಏರಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ