Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ನ್ಯಾಷನಲ್ ಪ್ಯಾರಾ ಥ್ರೋ ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದ : ಕರ್ನಾಟಕದ ಮಹಿಳಾ ತಂಡ

ಮೈಸೂರು: ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಪ್ರದರ್ಶನ ನೀಡಿದ ಕರ್ನಾಟಕದ ಮಹಿಳಾ ತಂಡ ನ್ಯಾಷನಲ್ ಪ್ಯಾರಾ ಥ್ರೋ ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೊಯಂತ್ತೂರಿನ ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ನಡೆದ ಪ್ಯಾರಾ ಥ್ರೋ ಬಾಲ್ ಚಾಂಪಿಯನ್ ಶಿಪ್‌ನ ಫೈನಲ್ ಪಂದ್ಯದಲ್ಲಿ ಎದುರಾಳಿ ಗುಜರಾತ್ ತಂಡಕ್ಕೆ ಒಂದು ಅಂಕವನ್ನು ಬಿಟ್ಟು ಕೊಡದೆ ಕರ್ನಾಟಕ ತಂಡ ದಿಗ್ವಿಜಯ ಸಾಧಿಸಿ ಸಾಧನೆಗೈದಿದ್ದಾರೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಝಾರ್ಖಂಡ್, ಉತ್ತರಖಂಡ, ಕೇರಳ ವಿವಿಧ ರಾಜ್ಯಗಳ ೯ ತಂಡಗಳು ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡಿದ್ದವು. ಆದರೆ, ಕರ್ನಾಟಕ ತಂಡದ ಆಕ್ರಮಣಕಾರಿ ಆಟ ಇತರೆ ತಂಡಗಳನ್ನು ಮಂಕು ಮಾಡಿತು. ತಂಡದ ನಾಯಕಿ ಜ್ಯೋತಿ, ಗೀತಾ ಮತ್ತು ಸರಸ್ವತಿ ಬೆಸ್ಟ್ ಸರ್ವಿಸ್‌ರ್ ಪ್ರಶಸ್ತಿಗೆ ಭಾಜನರಾಗಿ ಸಂಭ್ರಮಿಸಿದರು.

ಮಂಜುಳಾ ಬಜಂತ್ರಿ, ಮಂಜುಳಾ ಲಮಾಣಿ, ನಂದಿತಾ, ಫರ್ವಿನ್ ಮೆಹಬೂಬ್, ರಿಜ್ವಾನ್ ಜಮೇದಾರ್, ರೇಣುಕಾ, ಆಶಾ, ಸಂಗೀತ, ಗಾಯತ್ರಿ, ಆಸಿಂಬಿ, ಜಯಪ್ರದ ತಂಡದಲ್ಲಿದ್ದರು.

ಕೊಯಂತ್ತೂರಿನ ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ನಡೆದ ನ್ಯಾಷನಲ್ ಪ್ಯಾರಾ ಥ್ರೋ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ವಿಜೇತರಾದ ಕರ್ನಾಟಕ ಮಹಿಳಾ ತಂಡವನ್ನು ಚಿತ್ರದಲ್ಲಿ ಕಾಣಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!