Mysore
21
overcast clouds

Social Media

ಗುರುವಾರ, 01 ಜನವರಿ 2026
Light
Dark

ಉದ್ದನೂರು ಮಲ್ಲಣ್ಣ ಅವರಿಗೆ ‘ಪ್ರೊಫೆಸರ್ ಮಲ್ಲೇಪುರಂ ಪುರಸ್ಕಾರ’

ಹನೂರು: ಕಳೆದ 30 ವರ್ಷಗಳಿಂದ ನಮ್ಮ ಸಂಸ್ಕೃತ ಭಾಷೆ ವಿಭಾಗದಲ್ಲಿ ಸೇವೆ ಸಲ್ಲಿಸಿ ಸಾಧನೆಗೈದಿರುವ ಸಂಸ್ಕೃತ ವಿಷಯ ಪರಿವೀಕ್ಷಕ ಮಲ್ಲಣ್ಣ ರವರಿಗೆ ‘ಪ್ರೊಫೆಸರ್ ಮಲ್ಲೇಪುರಂ ಪುರಸ್ಕಾರ’ ಲಭಿಸಿದೆ.

ಶ್ರೀ ಫಲಹಾರ ಪ್ರಭುದೇವಸ್ವಾಮಿ ಸಂಸ್ಕೃತ ಪಾಠಶಾಲೆ ಹನೂರು ಮುಖ್ಯ ಶಿಕ್ಷಕರು ಹಾಗೂ ಮೈಸೂರು ವಲಯದ ವಿಷಯ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ವಾನ್ ಉದ್ದನೂರು ಮಲ್ಲಣ್ಣ ಅವರೇ ಈ ಗೌರವಕ್ಕೆ ಪಾತ್ರರಾಗಿರುವವರು.

ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಮಲ್ಲೆಪುರಂ ಜಿ.ವೆಂಕಟೇಶ್ ಅವರ ಹೆಸರಿನಲ್ಲಿ ಎಲೆಮರೆಯ ಸಂಸ್ಕೃತ ಸಾಧಕರಿಗೆ ಕೂಡಮಾಡಲಾಗುವ ‘ಪ್ರೊ.ಮಲ್ಲೇಪುರಂ ಪುರಸ್ಕಾರ’ಕ್ಕೆ ಭಾಜನರಾದ ರಾಜ್ಯದ ಐವರು ಸಾಧಕರ ಪೈಕಿ ಐವರ ಪೈಕಿ ಉದ್ದನೂರು ಮಲ್ಲಣ್ಣ ಕೂಡ ಒಬ್ಬರು.

7.2.1992 ರಿಂದ ಇಲ್ಲಿಯವರೆಗೆ ಸುಮಾರು 30 ವರ್ಷಗಳ ಸುಧೀರ್ಘ ಸೇವೆಯನ್ನು ಸಂಸ್ಕೃತ ಕ್ಷೇತ್ರಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಂಸ್ಕೃತ ಮುಖ್ಯ ಶಿಕ್ಷಕ ಉದ್ದನೂರು ಮಲ್ಲಣ್ಣ ಅವರಿಗೆ ಈ ಗೌರವ ಸಂದಿದೆ.

ಬೆಂಗಳೂರಿನ ಕನ್ನಡ ಭವನ ನಯನ ಸಭಾಂಗಣದಲ್ಲಿ ನಾಡೋಜ ಶ್ರೀ ಜಗದೀಶ ಶಿವಯ್ಯ ಗುಡಗುಂಟಿ ಮಠ ಸಂಸ್ಥಾಪಕ ಅಧ್ಯಕ್ಷರು ಶ್ರೀ ಪ್ರಭುಲಿಂಗೇಶ್ವರ ಶುಗರ್ ಮತ್ತು ಕೆಮಿಕಲ್ ಲಿ. ಜಮಖಂಡಿ ಪುರಸ್ಕಾರವನ್ನು ಪ್ರಧಾನ ಮಾಡಿದರು. ಎಂ.ಡಿ. ಶೈಲಜಾ ಉದಯ ಪ್ರಕಾಶನ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರ್ಜಗಿ, ನ್ಯಾಕ್ ಸಂಸ್ಥೆ ನಿರ್ದೇಶಕರಾದ ಡಾ. ಎಸ್.ಸಿ.ಶರ್ಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಬಿ.ವಿ. ವಸಂತಕುಮಾರ್ ಇನ್ನಿತರರೂ ಉಪಸಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!