Mysore
18
overcast clouds

Social Media

ಗುರುವಾರ, 01 ಜನವರಿ 2026
Light
Dark

ಟಗರು ಪಲ್ಯ ಮೂಲಕ ಪ್ರೇಮ್ ಮಗಳು ಬೆಳ್ಳಿತೆರೆಗೆ

ನಟ ಡಾಲಿ ಧನಂಜಯ್‌ ನಿರ್ಮಾಣದ ಹೊಸ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಮುಖ್ಯಪಾತ್ರ ನಿರ್ವಹಿಸಲಿದ್ದಾರೆ. ಆ ಮೂಲಕ ಅಮೃತಾ ಬೆಳ್ಳಿತೆರೆಗೆ ದೊಡ್ಡ ಪ್ರೊಡಕ್ಷನ್ ಹೌಸ್ ಮೂಲಕ ಎಂಟ್ರಿ ತೆಗೆದುಕೊಳ್ಳುತ್ತಿದ್ದಾರೆ.

ಚಿತ್ರದ ಮುಹೂರ್ತ ಈಗಾಗಲೇ ನಡೆದಿದ್ದು, ಇದರ ಬಗ್ಗೆ ಪ್ರೇಮ್ ಮಾತನಾಡಿದ್ದು, ಮೊದಲು ನಟನೆಗೆ ನೊ ಎನ್ನುತ್ತಿದ್ದ ಮಗಳು ಅಮೃತ ಒಮ್ಮೆಗೆ ಯಸ್ ಎಂದಳು. ಹೀಗಾಗಿ ಕತೆ ಓದಿ ಇಬ್ಬರಿಗೂ ಇಷ್ಟವಾಯ್ತು. ಡಾಲಿ ಚಿತ್ರ ನಿರ್ಮಿಸುತ್ತಿದ್ದಾನೆ ಎಂದು ಗೊತ್ತಾಗಿ ತುಂಬಾ ಖುಷಿ ಆಯ್ತು. ಇಲ್ಲಿಯವರೆಗೆ ನಮಗೆ ನೀಡಿದಂತೆ ನನ್ನ ಮಗಳಿಗೂ ಪ್ರೋತ್ಸಾಹ ನೀಡಿ ಎಂದು ಕೋರಿಕೊಂಡಿದ್ದಾರೆ.

ಟಗರು ಪಲ್ಯ
ಅಮೃತಾ ಅಭಿನಯಿಸಲಿರುವ ಮೊದಲ ಚಿತ್ರದ ಹೆಸರು ‘ಟಗರು ಪಲ್ಯ’. ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಸೆಟ್ ಬಾಯ್ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕರಾಗಿ ಭಡ್ತಿ ಪಡೆದಿರುವುದು ಅವರ ವಿಶೇಷತೆ.

ನಾಗಭೂಷಣ್ ನಾಯಕ

‘ಇಕ್ಕಟ್’ ಖ್ಯಾತಿಯ ನಾಗಭೂಷಣ್ ಚಿತ್ರದಲ್ಲಿ ನಾಯಕರಾಗಿ ನಟಿಸಲಿದ್ದಾರೆ. ಅವರ ಊರಿನ ಹೆಸರು ಟಗರುಪುರ ಆಗಿರುವುದಕ್ಕೂ ಚಿತ್ರದ ಹೆಸರಿಗೂ ಸಂಬಂಧವಿಲ್ಲ. ಇದು ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥೆ ಇದಾಗಿದೆ.

ವಾಸುಕಿ ವೈಭವ್ ಸಂಗೀತ ಸಂಯೋಜನೆ, ಎಸ್.ಕೆ. ರಾವ್ ಛಾಯಾಗ್ರಹಣ, ವಿನೋದ್ ಮಾಸ್ಟರ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ತಾರಾ ಬಳಗದಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!