Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆಂದೋಲನ ಓದುಗರ ಪತ್ರ : 02 ಶುಕ್ರವಾರ 2022

ನನೆಗುದಿಗೆ ಬಿದ್ದ ಅರೇನಹಳ್ಳಿ ಅಭಿವೃದ್ಧಿ

ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಹೋಬಳಿಯ ಅರೇನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಕೆಲ ಅಭಿವೃದ್ಧಿ ಯೋಜನೆಗಳು ಗ್ರಾಮ ಪಂಚಾಯಿತಿಯಿಂದ ಕಾರ್ಯಗತವಾಗದೆ ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿದೆ. ಆದರೆ ಅವರು, ಸರ್ಕಾರದಿಂದ ಅರೇನಹಳ್ಳಿ ಗ್ರಾಮದ ಮುಖ್ಯಬೀದಿಗೆ ಹಾಕಲಾಗಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ವೆಚ್ಚದ ಹಣವೇ ಇನ್ನೂ ಬಿಡುಗಡೆ ಆಗಿಲ್ಲ. ಆ ಅನುದಾನ ಬಿಡುಗಡೆಯಾದ ನಂತರ ಮತ್ತಿತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಮಜಾಯಿಷಿ ಕೊಟ್ಟು ನುಣುಚಿಕೊಳ್ಳುತ್ತಿದ್ದಾರೆ.

ಕಿರು ಸೇತುವೆ ದುರಸ್ತಿ ಆಗದೇ ಜಾನುವಾರು, ಸಾಕು ಪ್ರಾಣಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಹೊಲದಲ್ಲಿ ವಾಸ ಮಾಡುವ ಎಂಟು-ಹತ್ತು ಕುಟುಂಬಗಳಿಗೆ ಓಡಾಟ ದುಸ್ತರವೆನಿಸಿ ಬೇಸತ್ತಿದ್ದಾರೆ. ಹೊಸಕಟ್ಟೆ ಕೆರೆ ನೀರು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಇಲ್ಲದೇ ಸುಮ್ಮನೆ ಪೋಲಾಗಿ ಹರಿದು ಬೆಳೆಗಳ ಬೆಳವಣಿಗೆಗೆ ಕುಂಠಿತವೆನಿಸಿದೆ. ಈ ಎಲ್ಲ ಸಮಸ್ಯೆಗಳೂ ಕಣ್ಣಿಗೆ ಕಂಡರೂ ಕಾಣದಂತೆ ಇರುವುದನ್ನು ನೋಡಿದರೆ ಇದು ಇವರಿಗೆ ಅಭ್ಯಾಸವಾಗಿಹೋಗಿದೆ ಎನ್ನಬಹುದು. ಗ್ರಾಮದ ಜನರು ಈ ಬಗ್ಗೆ ಎಲ್ಲಾ ಬಗೆಯಲ್ಲಿ ತಿಳಿಸಿದರೂ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಮನಸ್ಸು ಮಾಡುತ್ತಿಲ್ಲ. ಜನಪ್ರತಿನಿಧಿಗಳು ಮತಾಂಚನೆ ಮಾಡುವಾಗ ಗ್ರಾಮದ ಅಭಿವೃದ್ಧಿಗಾಗಿ ಕಂಕಣ ಕಟ್ಟಿಕೊಂಡು ಪ್ರಾವಾಣಿಕತೆ ದುಡಿಯುತ್ತೇವೆ ಎಂಬ ಆಶ್ವಾಸನೆ ಕಾಗದದಲ್ಲೇ ಉಳಿದಿದೆ. ಈ ಬಗ್ಗೆ ಪಿರಿಾಂಪಟ್ಟಣದ ಶಾಸಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ಹಣಾಧಿಕಾರಿಗಳು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈಗಲಾದರೂ ಅರೇನಹಳ್ಳಿ ಗ್ರಾಮದ ಯೋಜನೆಗಳಿಗೆ
-ಎ.ಎಸ್.ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.


ಒಡನಾಡಿ ವಿರುದ್ಧ ಹುನ್ನಾರ?

ಒಡನಾಡಿ ಸೇವಾ ಸಂಸ್ಥೆಯು ಹುಟ್ಟಿದಾರಭ್ಯ ಶತ್ರುಗಳನ್ನು ಬೆನ್ನಿಗೇ ಕಟ್ಟಿಕೊಂಡಿದೆ. ಅನಾಥ ಮಹಿಳೆಯರು, ಹೆಣ್ಣುಮಕ್ಕಳ ರಕ್ಷಣೆಗಾಗಿ ಸುಮಾರು ಮೂರು ದಶಕಗಳಿಂದಲೂ ಶ್ರಮಿಸುತ್ತಿರುವ ಸಂಸ್ಥೆಗೆ ಸವಾಜ ದ್ರೋಹಿಗಳು, ಮಾನವ ಸಾಗಣೆದಾರರೇ ವೈರಿಗಳು. ಈ ದುಷ್ಕರ್ಮಿಗಳಿಗೆ ಬೆಂಬಲ ನೀಡುವವರಿಗೂ ಒಡನಾಡಿ ಸಂಸ್ಥೆ ಬಗ್ಗೆ ಆಕ್ರೋಶ ಇದೆ. ಒಡನಾಡಿಯು ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಪ್ರಕರಣವನ್ನು ಬಯಲಿಗೆಳೆದಿದ್ದೇ, ಅದರ ವಿರುದ್ಧ ಮತ್ತುಷ್ಟ ಸಂಚು, ಹುನ್ನಾರಕ್ಕೆ ಅವಕಾಶ ನೀಡಿದಂತೆ ಆಗಿದೆ ಅನಿಸುತ್ತದೆ.

ಶರಣರನ್ನು ಉದ್ದೇಶಪೂರ್ವಕವಾಗಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸಲು ಒಡನಾಡಿ ಸಂಚು ನಡೆಸಿದೆ ಎಂಬುದಾಗಿ ಕೆಲವರು ದೂರು ದಾಖಲಿಸಿದ್ದಾರೆ. ಆದರೆ, ಇದಕ್ಕೆ ಒಡನಾಡಿಯು ನಿರ್ದೇಶಕದ್ವಯರು ಜಗ್ಗದೇ ಶರಣರು ಅಪ್ರಾಪ್ತೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಪ್ರಕರಣದಲ್ಲಿ ಸಂತ್ರಸ್ತೆಯ ಪರ ಹೋರಾಟ ಮುಂದುವರಿಸಿದ್ದಾರೆ. ಇದನ್ನು ಸಹಿಸದೆ ಬಹುಶಃ ಪೊಲೀಸ್ ‘ಶಕ್ತಿಯನ್ನು ಬಳಸಲು ಕಾಣದ ಕೈಗಳು ಕೆಲಸ ಮಾಡಿರಬಹುದು.

ಒಡನಾಡಿಯಲ್ಲಿ ಪರಿಶೀಲನೆಗೆ ತೆರಳಿದ್ದ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ ಎಂದು ಭಾವಿಸಿ ಒಡನಾಡಿಗೆ ಬಂದಿದ್ದಾಗಿ ಹೇಳಿದ್ದಾಗಿ ವರದಿಯಾಗಿದೆ. ಹಾಗಾಗಿ ಅವರ ಹೇಳಿಕೆ ಅನುವಾನಾಸ್ಪದವಾಗಿದೆ. ಒಂದು ವೇಳೆ ಅದು ನಿಜವಾಗಿದ್ದರೂ ಪೊಲೀಸರ ಬೇಜವಾಬ್ದಾರಿಯ ಕರ್ತವ್ಯ ಲೋಪವಾಗುತ್ತದೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.
-ಎಚ್.ಎಂ.ಸೂರ್ಯಕುವಾರ್, ಹೂಟಗಳ್ಳಿ, ಮೈಸೂರು.


‘ಆದ್ಯತೆ’ಯಲ್ಲಿ ಅನ್ಯಾಯ ಆಗದಿರಲಿ

ರಾಜ್ಯ ಸರ್ಕಾರ ಆದ್ಯತಾ ಪಡಿತರ ಚೀಟಿ ವಿತರಣೆಗೆ ಆದೇಶ ನೀಡಿರುವುದು ಸ್ವಾಗತಾರ್ಹ. ಈಗಾಗಲೇ ಅರ್ಜಿ ಸಲ್ಲಿಸಿರುವ ಅದೆಷ್ಟೋ ಬಡ ಕುಟುಂಬಗಳು ತಮಗೆ ‘ಆದ್ಯತೆ’ ಯಾವಾಗ ಸಿಗಬಹುದು ಎಂಬುದಾಗಿ ಚಾತಕಪಕ್ಷಿಗಳಂತೆ ಕಾತರದಿಂದ ಕಾಯುತ್ತಿದ್ದಾರೆ. ನಿಜವಾಗಿ ಅರ್ಹತೆ ಇರುವವರಿಗೇ ಆದ್ಯತಾ ಪಡಿತರ ಚೀಟಿ ದೊರೆಯಬೇಕು. ಅನರ್ಹರು ಯಾರದೋ ಪ್ರಭಾವ ಬಳಸಿಕೊಂಡು ಈ ಪಡಿತರ ಚೀಟಿ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದಕೆ ಅವಕಾಶ ನೀಡಬಾರದು.

ಅಲ್ಲದೆ, ಕೆಲವೆಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಕೂಡ ತಮ್ಮ ವಿಶ್ವಾಸಿಗರಿಗೆ ಅರ್ಹತೆ ಇಲ್ಲದಿದ್ದರೂ ಅದ್ಯತಾ ಪಡಿತರ ಚೀಟಿ ಒದಗಿಸುವುದು ವಾಡಿಕೆಯಂತೆ ಆಗಿದೆ. ಇದಲ್ಲದೆ, ಸ್ಥಳೀಯ ಜನಪ್ರತಿನಿಧಿಗಳು ಮತಬ್ಯಾಂಕ್ ದೃಷ್ಟಿಯಿಂದ ಅನರ್ಹರಿಗೂ ಪಡಿತರ ಚೀಟಿ ಕೊಡಿಸುವುದಕ್ಕೆ ಮುಂದಾಗುತ್ತಾರೆ. ಆಹಾರ ಅಭದ್ರತೆಯಿಂದ ಪರಿತಪಿಸುತ್ತಿರುವ ಕುಟುಂಬಗಳಿಗೆ ಪಡಿತರ ಚೀಟಿ ಸಿಗಬೇಕು. ಅಲ್ಲದೆ, ಈ ಪಡಿತರ ಚೀಟಿ ಹೊಂದಿದವರಿಗೆ ಆರೋಗ್ಯ ವಿವಾ ಸೌಲಭ್ಯ ಕೂಡ ಇದೆ ಎಂಬುದು ಗಮನಾರ್ಹ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಹಲವು ಕಾಯಿಲೆಗಳಿಗೆ ಅಥವಾ ಶಸ್ತ್ರಚಿಕಿತ್ಸೆಗಳಿಗೆ ವೆಚ್ಚದ ಹಣದಲ್ಲಿ ದೊಡ್ಡ ಮೊತ್ತದ ರಿಯಾಯಿತಿ ಈ ಪಡಿತರ ಚೀಟಿ ಫಲಾನುಭವಿಗಳಿಗೆ ಲಭಿಸುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅಥವಾ ಚಿಕಿತ್ಸಾ ವೆಚ್ಚ ಭರಿಸುವುದು ದುಬಾರಿಾಂಗುತ್ತಿದೆ. ಈ ಕಾರಣಕ್ಕೇ ಅರ್ಹರಿಗೇ ಪಡಿತರ ಚೀಟಿ ಲಭಿಸಬೇಕು. ಅದಕ್ಕೆ ಸೂಕ್ತ ರೀತಿಯಲ್ಲಿ ವಿತರಣಾ ವ್ಯವಸ್ಥೆಯನ್ನೂ ಸರ್ಕಾರ ಮತ್ತು ಅಧಿಕಾರಿಗಳು ರೂಪಿಸಬೇಕು.
-ಕೆ.ಎಂ.ಕೃಷ್ಣಕುಮಾರ್, ಕೆ.ಆರ್.ನಗರ.


ಬಹುರೂಪಿಯಲ್ಲಿ ಬ್ರಾಂಡ್ ಆಗುವುದೇ?

ಮೈಸೂರು ರಂಗಾಯಣದಿಂದ ಇದೇ ಡಿ.೮ರಿಂದ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬ್ರಾಂಡ್ ಆಗಬೇಕು. ಆ ನಿಟ್ಟಿನಲ್ಲಿ ರಂಗಾಯಣ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದ್ದಾರೆ (ಆಂ.ಡಿ.೧). ಆದರೆ, ಇತ್ತೀಚಿನ ದಿನಗಳಲ್ಲಿ ರಂಗಾಯಣದ ಹೆಜ್ಜೆಗಳು ಜಿಲ್ಲಾಧಿಕಾರಿ ಅವರ ಸೂಚನೆಗೆ ವ್ಯತಿರಿಕ್ತವಾಗಿವೆ. ಬಹುಶಃ ಬಹುರೂಪಿ ಕೂಡ ಗುಪ್ತ ಕಾರ್ಯಸೂಚಿಯಡಿಯಲ್ಲೇ ನಾಟಕ ಪ್ರದರ್ಶನಕ್ಕೆ ವೇದಿಕೆಯನ್ನು ಸಿದ್ಧಪಡಿಸಿರುವಂತೆ ಭಾಸವಾಗುತ್ತಿದೆ.

ಹಿಂದಿನ ಬಹುರೂಪಿಗಳಲ್ಲಿ ಬಹುತೇಕ ಸಾಮಾಜಿಕ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರತ್ಯೃದ ಆಶಯಗಳಿಗೇ ಪ್ರಾಧಾನ್ಯತೆ ಇರುತ್ತಿತ್ತು. ಏಕೆಂದರೆ ಬಹುತ್ವ ಭಾರತದಲ್ಲಿ ಪ್ರಜಾಪ್ರಭತ್ವ ಪರಿಪೂರ್ಣವಾಗಿ ಅನುಷ್ಠಾನಗೊಳ್ಳಬೇಕಾದರೆ, ಅವೆಲ್ಲ ಅತ್ಯಗತ್ಯ. ದೇಶ ಸ್ವಾತಂತ್ರತ್ಯೃ ಗಳಿಸಿ ೭೫ ವರ್ಷಗಳಾದರೂ ಇನ್ನೂ ಜಾತೀುಂತೆ, ಅಸ್ಪೃಶ್ಯತೆ, ಸಾಮಾಜಿಕ ಶೋಷಣೆಗಳು ನಿರ್ನಾಮವಾಗಿಲ್ಲ. ಹಾಗಾಗಿ ರಂಗಾಯಣ ಅಥವಾ ರಂಗಭೂಮಿ ಈ ಸಾಮಾಜಿಕ ವೈರುಧ್ಯಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಹುರೂಪಿಯನ್ನು ರೂಪಿಸುತ್ತಿತ್ತು. ಆದರೆ, ಪ್ರಸ್ತುತ ರಂಗಾಯಣದಲ್ಲಿ ಅಂತಹ ವಾತಾವರಣ ಇಲ್ಲ ಅನಿಸುತ್ತಿದೆ. ರಂಗಾಯಣದ ನಿರ್ದೇಶಕರು ಕೈಗೊಳ್ಳುತ್ತಿರುವ ನಿರ್ಧಾರಗಳು ಯಾವೊದೋ ಗುಪ್ತ ಕಾರ್ಯ ಸೂಚಿಯಂತೆ ಕಾಣುತ್ತಿವೆ. ಈಗಲಾದರೂ ಜಿಲ್ಲಾಧಿಕಾರಿಯವರ ಆದೇಶದಂತೆ ಬಹುರೂಪಿ ಬ್ರಾಂಡ್ ಆಗಿ ರೂಪಿಸುವತ್ತ ರಂಗಾಯಣ ನಿರ್ದೇಶಕರು ಚಿತ್ತ ಹರಿಸಬೇಕು.
-ಆರ್.ಜಯಶ್ರೀ, ಮೇಟಗಳ್ಳಿ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ