Mysore
15
scattered clouds

Social Media

ಶನಿವಾರ, 24 ಜನವರಿ 2026
Light
Dark

ಮೂವರು ಮಕ್ಕಳಿಗೂ ವಿಷ ಉಣಿಸಿ ತಾನೂ ನೇಣಿಗೆ ಶರಣು

ಮoಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತು ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿ ಘಟನೆ ನಡೆದಿದೆ.

ಹೊಳೆ ಬೀದಿಯ ನಿವಾಸಿ ಹಾಗೂ ಕಾರು ಮೆಕಾನಿಕಲ್ ಆಖಿಲ್ ಅವರ ಪತ್ನಿ ಉಸ್ನಾ ಕೌಸರ್ (30) ಆತ್ಮಹತ್ಯೆಗೆ ಶರಣಾದವರು. ಈಕೆ 7 ವರ್ಷದ ಪುತ್ರ ಹಾರಿಸ್, ಮಗಳು ಆಲಿಸಾ (4) ಹಾಗೂ ಅನಮ್ ಪಾತಿಮಾ (2)ಗೆ ವಿಷ ಉಣಿಸಿ ಹತ್ಯೆ ಮಾಡಿದ್ದಾರೆ.

ಪತಿ ಅಖಿಲ್ ಅಹಮದ್ ಚನ್ನಪಟ್ಟಣದಲ್ಲಿ ಕಾರು ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪತ್ನಿ ಪಟ್ಟಣದ ನರ್ಸಿಂಗ ಕರ್ತವ್ಯ ನಿರ್ವಹಿಸುತ್ತಿದ್ದರೆ ಎನ್ನಲಾಗಿದೆ ಕರ್ತವ್ಯ ಮುಗಿಸಿ ಮನೆಗೆ ಆಗಮಿಸಿದ ಉಷ್ಣ ಕೌಸರ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮೂರು ಮಕ್ಕಳನ್ನು ನೀನು ಬಿಗಿದು ಬಳಿಕ ತಾನು ಆತ್ಮಹತ್ಯೆ ಶರಣಾಗಿರುವ ಘಟನೆ ಜರುಗಿದೆ. ‌ ಬಳಿಕ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!