Mysore
19
broken clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಕೊನೆಗೂ ಪ್ರಾರಂಭವಾದ ಕೆಆರ್‌ಎಸ್ ಬೃಂದಾವನ

ಚಿರತೆ ನುಸುಳದಂತೆ ಎಲ್ಲ ರೀತಿಯ ಮುಂಜಾಗ್ರತೆ: ಈಯ್ ಫಾರೂಕ್ ಅಬು

ಮಂಡ್ಯ: ಒಂದು ತಿಂಗಳಿನಿಂದ ಮುಚ್ಚಲಾಗಿದ್ದ ಪ್ರಸಿದ್ಧ ಕೆಆರ್‌ಎಸ್ ಬೃಂದಾವನವನ್ನು ಬುಧವಾರ ಸಂಜೆ ಪ್ರವಾಸಿಗರಿಗಾಗಿ ತೆರೆಯಲಾಗಿದೆ.

ಬೃಂದಾವನದ ಉತ್ತರ ಭಾಗದ ಚಿರತೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿರುವ ಸುರಕ್ಷತೆಯ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಅದಾಗಿ ಸುಮಾರು ೩೦ ದಿನ ಕಳೆಯುವಷ್ಟರಲ್ಲಿ ಅರಣ್ಯ ಇಲಾಖೆ ಹತ್ತಾರು ರೀತಿಯ ಪ್ರಯತ್ನ ನಡೆಸಿ ಚಿರತೆ ಸೆರೆ ಹಿಡಿಯಲು ಕಸರತ್ತು ನಡೆಸಿದರೂ ಫಲ ನೀಡಿಲ್ಲ.

8 ಬೋನುಗಳನ್ನು ಆಯಕಟ್ಟಿನ ಪ್ರದೇಶದಲ್ಲಿ ಇರಿಸಿದ್ದಲ್ಲದೆ, ಕಾಂಬಿಂಗ್ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಇಡೀ ಉತ್ತರ ಬೃಂದಾವನವನ್ನು ಜಾಲಾಡಿದರೂ ಚಿರತೆಯ ಸುಳಿವು ಆಗಲಿಲ್ಲ. ಇದೀಗ ಹುಲಿ ಟ್ಯಾಂಕ್ ಅನುಸರಿಸಿ ಹೆಚ್ಚಿನ ಸಿಬ್ಬಂದಿಯೊಂದಿಗೆ ಉತ್ತರ ಬೃಂದಾವನದಲ್ಲಿ ಚಿರತೆ ಸೆರೆಗೆ ಇಡೀ ಅರಣ್ಯ ಸಿಬ್ಬಂದಿ ಕಾರ್ಯೋನ್ಮುಖವಾಗಿದೆ.

ಈ ಬೃಂದಾವನ ಪ್ರವೇಶ ಶುಲ್ಕದಿಂದ ಬರುತ್ತಿದ್ದ ಆದಾಯ ಮತ್ತು ವ್ಯಾಪಾರ ವಹಿವಾಟಿನಿಂದ ಬದುಕು ಕಂಡುಕೊಂಡಿದ್ದ ವ್ಯಾಪಾರಿಗಳ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಂಡು 8 ಬೋನ್ಗಳನ್ನಿಟ್ಟು, ಬೃಂದಾವನದ ಗೇಟ್‌ಗಳಲ್ಲಿ ಅರಣ್ಯ ಇಲಾಖೆ ಮತ್ತು ಕೆಆರ್‌ಎಸ್‌ನ ಸಿಬ್ಬಂದಿಯನ್ನು ನಿಗದಿಪಡಿಸಲಾಗಿದೆ.

ಚಿರತೆ ಪ್ರತಿನಿಧಿಗಳು ಮುಂಜಾಗ್ರತಾ ಕ್ರಮವಾಗಿ ಒಂದು ವಾರದ ಮಟ್ಟಿಗೆ ಗಾರ್ಡನ್ ಬಂದ್ ಮಾಡಿ ಜನರು, ಪ್ರವೇಶ ತಡೆದಿದ್ದರು. ಆದರೆ, ನಂತರದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಂಡಿಲ್ಲ, ಮುಳ್ಳು ಹಂದಿ ಜತೆ ಹೋರಾಟ ನಡೆಸಿದ ದೃಶ್ಯಗಳು ಚಿರತೆ ಇಲ್ಲೇ ಎಲ್ಲೋ ಅಡಗಿದೆ ಎಂಬ ಆತಂಕಕ್ಕೆ ಕಾರಣವಾಗಿತ್ತು. ನಾರ್ತ್ ಬ್ಯಾಂಕ್ ಪ್ರದೇಶದ ನಿವಾಸಿಗಳು ಕತ್ತಲೆಯಾಗುತ್ತಲೇ ಮನೆ ಸೇರಿಕೊಳ್ಳುವ ಬೆಳವಣಿಗೆ ಕಂಡುಬಂತು. ಬೃಂದಾವನಕ್ಕೆ ಪ್ರವೇಶ ನಿಷೇಧಿಸಲಾಗಿದೆ ಪ್ರವಾಸಿ ಸ್ಥಳವನ್ನು ಜೀವನೋಪಾಯಕ್ಕಾಗಿ ನಂಬಿಕೊಆಡಿದ್ದ ವ್ಯಾಪಾರಸ್ಥರು ಕಣ್ಣೀರು ಹಾಕುತ್ತಾರೆ.

ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರವೇಶ ಶುಲ್ಕದಿಂದ 90 ಲಕ್ಷ ನಷ್ಟ:

ಬೃಂದಾವನದ ಸೊಬಗನ್ನು ನೋಡಲು ದೇಶದ ವಿವಿಧೆಡೆಯಿಂದ ಬರುವ ಪ್ರವಾಸಿಗ ವಯಸ್ಕರಿಗೆ 50 ರೂ., ಮಕ್ಕಳಿಗೆ 10 ರೂ., ವಿದೇಶಿಯರಿಗೆ 200 ರೂ.ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ಇಲ್ಲದ ಪ್ರತಿ ದಿನ ಸುಮಾರು ೨.೫ ರಿಂದ ೩ ಲಕ್ಷ ರೂ. ಪ್ರವೇಶ ಶುಲ್ಕದಿಂದಲೇ ವಸೂಲಾಗುತ್ತಿತ್ತು. ಶನಿವಾರ ಭಾನುವಾರ ಸೇರಿದಂತೆ ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಆಗಮಿಸುವುದು ವಾಡಿಕೆ, ೩೦ ದಿನಗಳಿಂದ ಆಗಿರುವ ನಷ್ಟವನ್ನು ಕಾಣಬಹುದು. ಇದಲ್ಲದೆ, ಪಾರ್ಕಿಂಗ್ ಶುಲ್ಕ, ಬೋಟಿಂಗ್, ಗಾರ್ಡನ್ ಒಳಗೆ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು, ಮೀನು ಹೋಟೆಲ್‌ಗಳು ಸೇರಿದಂತೆ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳೂ ಬಂದ್ ಆಗಿದ್ದರಿಅದು ಇನ್ನೂ ಹೆಚ್ಚಿನ ನಷ್ಟವಾಗಿದೆ ಎನ್ನುತ್ತಾರೆ ಕೆಆರ್‌ಎಸ್‌ನ ಇಐಐ ಫಾರೂಕ್ ಅಬು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ