ಮೈಸೂರು: ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆ ವತಿಯಿಂದ ಮೈಸೂರಿನ ಆಲನಹಳ್ಳಿಯಲ್ಲಿರುವ ವಿಜ್ಞಾನ ಸಂಪನ್ಮೂಲ ಕೇಂದ್ರದಲ್ಲಿ ಮಕ್ಕಳಿಗಾಗಿ ಸ್ಟೀಮ್ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮೈಸೂರಿನ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಅನೇಕ ವಿಜ್ಞಾನದ ಕುತೂಹಲ ಸಂಗತಿಗಳನ್ನು ಪ್ರಯೋಗಗಳನ್ನು ಮಾಡಿ ನೋಡಿ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿ ಆನಂದಿಸಿದರು. ಕಾರ್ಯಾಗಾರದಲ್ಲಿ ಏರೋ ಮಾಡಲಿಂಗ್ ಶೋ, ವಾಟರ್ ರಾಕೆಟ್ ಲಾಂಚಿಂಗ್, ಹ್ಯಾಮ್ ರೇಡಿಯೋ ಪ್ರಾತ್ಯಕ್ಷಿಕೆ, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ನೀನೇ ಮಾಡಿ ನೋಡು ಚಟುವಟಿಕೆಗಳು, ಗಣಿತ ಮಾದರಿ ತಯಾರಿಕೆ, ಗಣಿತ ಕುಣಿತ, ತ್ರೀಡಿ ಪ್ರಿಂಟಿಂಗ್, ವಿಜ್ಞಾನ ಪ್ರಯೋಗಗಳ ವಿವರಣೆ, ಆಕಾಶ ವೀಕ್ಷಣೆ, ವಿಜ್ಞಾನ ಮಾದರಿಗಳ ಪ್ರದರ್ಶನ, ಮಾನವನ ದೇಹದ ಅಂಗಗಳ ಬಗೆಗಿನ ಪ್ರದರ್ಶನಗಳನ್ನು ಒಳಗೊಂಡಂತೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ವಿಜ್ಞಾನ, ತಂತ್ರಜ್ಞಾನ, ಕಲೆ ಹಾಗೂ ಗಣಿತಕ್ಕೆ ಸಂಬಂಧಪಟ್ಟಂತಹ ಅನೇಕ ವಿಷುಂಗಳನ್ನು ಈ ಕಾರ್ಯಾಗಾರ ಒಳಗೊಂಡಿತ್ತು.
ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಮಾತನಾಡಿ, ಮಕ್ಕಳಲ್ಲಿ ಸಂಶೋಧನೆ ಬಗ್ಗೆ ವಿಜ್ಞಾನ ಸಂಶೋಧನೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿ, ಭವಿಷ್ಯದಲ್ಲಿ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಉತ್ತಮ ಪ್ರೇರಣೆ ನೀಡಲು ಸಂಸ್ಥೆಯು ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಸ್ಥೆಯ ಎಮಿಲ್ ಪಾಲ್, ಎಂ.ಬಿ.ಮಹೇಶ್, ಎಸ್.ಹರ್ಷ, ಎಂ.ಗಾಯತ್ರಿ, ಬಿ.ಕೃಷ್ಣಮೂರ್ತಿ, ವೈದ್ಯ ಡಾ.ಎನ್.ಎಂ.ಶ್ಯಾಮಸುಂದರ್, ಗಾುಂತ್ರಿ, ಎಂ.ಸಿಮ್ರಾಮ್, ಖಗೋಳ ವಿಜ್ಞಾನಿ ಡಾ.ಎಸ್.ಎನ್.ಪ್ರಸಾದ್, ಅಮೋಘವರ್ಷ, ಸುಧಾಕರ್, ಯೋಗೇಶ್, ಪ್ರಕಾಶ್, ಸೂರ್ಯ ಹಾಗೂ ಸುಹೃತ್ ಜಮದಗ್ನಿ, ಸಂಸ್ಥೆ ಅಧ್ಯಕ್ಷ ಎಸ್.ಪ್ರಕಾಶ್, ವಿಜ್ಞಾನ ಲೇಖಕಿ ಶ್ರೀಮತಿ ಹರಿಪ್ರಸಾದ್, ಪುಷ್ಕಲ ಮುರಳಿ, ಸಂತೋಷ್ ಕುಮಾರ್, ಸೋಮರಾಜು, ಛಾಯಾಗ್ರಾಹಕ ರವಿಶಂಕರ್, ಪ್ರಭಾನಂದ್, ನವೀನ್, ಭುವನ್ ಅರ್ಚನಾ ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.