ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಹಾಲು, ಬೆಣ್ಣೆ ಮಾತ್ರವಲ್ಲದೇ ಕೋಳಿ ರಕ್ತವನ್ನೂ ಹುತ್ತಕ್ಕೆ ಎರೆದು ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮನೆಮಂದಿಯಲ್ಲಾ ಒಟ್ಟಾಗಿ ತೆರಳಿ ಹಾಲು, ಬೆಣ್ಣೆ ಮಿಶ್ರಿತ ಬಾಳೆಹಣ್ಣನ್ನು ಹುತ್ತದ ಕೋವಿಗೆ ಹಾಕಿ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂದಿತು.ಇದೇ ರೀತಿ ನಗರದ ಉಪ್ಪಾರ ಬಡಾವಣೆ, ಉತ್ತುವಳ್ಳಿ, ಮಲ್ಲಯ್ಯನಪುರ, ಯಡಪುರ, ಕೆ.ಕೆ.ಹುಂಡಿ, ಯಳಂದೂರಿನ ಗುಂಬಳ್ಳಿ ಮೊದಲಾದಕಡೆ ಪೂಜೆ ನಂತರ ಕೋಳಿಕೊಂದು ಅದರ ರಕ್ತವನ್ನು ಹುತ್ತದ ಬಾಯಿಗೆ ಹರಿಸಲಾಯಿತು. ಕೋಳಿಮೊಟ್ಟೆಯನ್ನೂ ಹುತ್ತದೊಳಕ್ಕೆ ಬಿಡಲಾಯಿತು.
ಬೆಳಗಿನ ಜಾವದಿಂದ ಮಧ್ಯಾಹ್ನದವರೆಗೂ ಈ ಆಚರಣೆ ನಡೆಯಿತು. ಗುಂಡ್ಲುಪೇಟೆಯ ಕೆಲವೆಡೆ ಸಪ್ಪೆವಡೆ, ತಂಬಿಟ್ಟು, ಪಂಚಾಮೃತ ಇತ್ಯಾದಿಯನ್ನು ಹುತ್ತದ ಮುಂದಿಟ್ಟು ನೈವೇದ್ಯ ,ಮಾಡಿರುವುದು ಗೋಚರಿಸಿತು.
ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿರಕ್ತ, ಮೊಟ್ಟೆ!





