Mysore
28
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಾಜ್ಯದ ಹಲವು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗ

ಮೈಸೂರು: ರಾಜ್ಯದ ಹಲವು ಪೊಲೀಸ್ ಇನ್ ಸ್ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಡಿ.ಯೋಗೇಶ್ ಅವರನ್ನು ನಗರದ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಗೆ, ಸಿದ್ದಾರ್ಥನಗರ ಠಾಣೆಯಲ್ಲಿದ್ದ ಎಂ.ಆರ್. ನಟರಾಜ್ ಅವರನ್ನು ರಾಜ್ಯ ಗುಪ್ತವಾರ್ತೆಗೆ, ಮೈಸೂರು ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿದ್ದ ಶಬ್ಬೀರ್ ಹುಸೇನ್ ಅವರನ್ನು ಉದಯಗಿರಿ ಪೊಲೀಸ್ ಠಾಣೆಗೆ, ಉದಯಗಿರಿ ಪೊಲೀಸ್ ಠಾಣೆಯಲ್ಲಿದ್ದ ಪಿ.ಕೆ.ರಾಜು ಅವರನ್ನು ಸೆನ್ ಠಾಣೆಗೆ ವರ್ಗಾಯಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ವೃತ್ತದಲ್ಲಿದ್ದ ಕೆ.ವಿ. ಕೃಷ್ಣಪ್ಪ ಅವರನ್ನು ತಿ.ನರಸೀಪುರ ಪೊಲೀಸ್ ಠಾಣೆಗೆ, ತಿ.ನರಸೀಪುರ ಠಾಣೆಯಲ್ಲಿದ್ದ ಎನ್.ಜಿ. ಕೃಷ್ಣಪ್ಪ ಅವರನ್ನು ಕೊಡಗಿನ ಸೆನ್ ಠಾಣೆಗೆ, ಕೆ.ಜಿ.ಎಫ್.ನ ಕಾಮಸಮುದ್ರ ವೃತ್ತದಲ್ಲಿದ್ದ ಜೆ.ಎನ್.ಆನಂದ್ ಕುಮಾರ್ ಅವರನ್ನು ತಲಕಾಡು ಪೊಲೀಸ್ ಠಾಣೆಗೆ, ತಲಕಾಡು ಠಾಣೆಯಲ್ಲಿದ್ದ ಎಲ್. ಅರುಣ್ ಅವರನ್ನು ನಗರದ ಕುವೆಂಪುನಗರ ಪೊಲೀಸ್ ಠಾಣೆಗೆ, ಕುವೆಂಪುನಗರ ಠಾಣೆಯಲ್ಲಿದ್ದ ಕೆ. ಷಣ್ಮುಗ ವರ್ಮ ಅವರನ್ನು ಪಿಟಿಎಸ್ ಠಾಣೆಗೆ, ಪಿಟಿಎಸ್ ಠಾಣೆಯಲ್ಲಿದ್ದ ಎಸ್.ನಾಗೇಶ್ ಅವರನ್ನು ಮಂಡಿ ಪೊಲೀಸ್ ಠಾಣೆಗೆ, ಮಂಡಿ ಠಾಣೆಯಲ್ಲಿದ್ದ ಕೆ.ಆರ್. ರಘು ಅವರನ್ನು ಮಂಡ್ಯದ ಡಿ.ಎಸ್.ಬಿ ಗೆ ನಿಯೋಜಿಸಲಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಗ್ರಾಮಾಂತರ ವೃತ್ತದಲ್ಲಿದ್ದ ಟಿ.ಬಿ.ಶಿವಕುಮಾರ್ ಅವರನ್ನು ದೇವರಾಜ ಪೊಲೀಸ್ ಠಾಣೆಗೆ, ದೇವರಾಜ ಪೊಲೀಸ್ ಠಾಣೆಯಲ್ಲಿದ್ದ ಆರ್. ದಿವಾಕರ್ ಅವರನ್ನು ಮೇಟಗಳ್ಳಿ ಪೊಲೀಸ್ ಠಾಣೆಗೆ, ಸರಗೂರು ವೃತ್ತದಲ್ಲಿದ್ದ ಎನ್.ಆನಂದ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ, ಪಿರಿಯಾಪಟ್ಟಣ ಠಾಣೆಯಲ್ಲಿದ್ದ ಪಿ.ಜಗದೀಶ್ ಅವರನ್ನು ಕೆ.ಆರ್. ಪೇಟೆ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ