Mysore
28
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಕಿಕ್ ಬಾಕ್ಸಿoಗ್ ಸ್ಪರ್ಧೆ : ಶಶಾಂಕ್ ಗೆ ಚಿನ್ನದ ಪದಕ

ಹನೂರು : ಭಾನುವಾರ ಗೋವಾದಲ್ಲಿ  ನಡೆದ ಅಂತರರಾಜ್ಯ ಕಿಕ್ ಬಾಕ್ಸಿoಗ್  ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುವ ತಾಲೂಕಿನ ಶಶಾಂಕ್. ಪಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ತಾಲೂಕಿನ ಮಹದೇಶ್ವರ ಬೆಟ್ಟದ ನಿವಾಸಿಯಾದ ಪುಟ್ಟಸ್ವಾಮಿ  (ಶಿಕ್ಷಕರು ದೊಮ್ಮನಗದ್ದೆ ಸರ್ಕಾರಿ ಶಾಲೆ ) ಮಾದಲಾಂಬಿಕಾ ಪುತ್ರನಾದ ಇವರು ಭಾನುವಾರ ಗೋವಾದಲ್ಲಿ ನಡೆದ ಅಂತಾರರಾಜ್ಯ ಕಿಕಿ ಬಾಕ್ಸಿoಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಏಷ್ಯಾ ಕಪ್ ಗೆ  ಆಯ್ಕೆ :  ತಾಲೂಕಿನ ಚಿನ್ನದ ಹುಡುಗ ಶಶಾಂಕ್ ಮುಂದಿನ ಡಿಸೆoಬರ್ ತಿಂಗಳ 10 ರಿಂದ 18 ರವರೆಗೆ ಥೈಲ್ಯಾಂಡ್ ನಲ್ಲಿ ನಡೆಯುವ ಏಷ್ಯಾ ಕಪ್ ಕಿಕ್ ಬಾಕ್ಸಿoಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾನೆ.

ಚಿನ್ನ ಪಡೆಯುತ್ತಿರುವ ಚಿನ್ನದಂತ ಹುಡುಗ : ಈ ಹಿಂದೆ ನೇಪಾಳ ಹಾಗೂ ಪಂಜಾಬಿನ ಅಮೃತ ಸರದಲ್ಲಿ ನಡೆದ ಕಿಕ್ ಬಾಕ್ಸಿoಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು..

ತಾಲೂಕಿನ ಕೀರ್ತಿ ಪತಾಕೆ : ಅಂತಾರರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುವ ಮೂಲಕ ಚಿನ್ನದ ಪದಕ ಪಡೆಯುವ ಮೂಲಕ ನಮ್ಮ ತಾಲೂಕಿನ ಕೀರ್ತಿ ಪತಾಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಅಲ್ಲದೆ ಗ್ರಾಮೀಣ ಪ್ರತಿಭೆಯನ್ನು ಜನರು ಸಹ ಮತ್ತಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ತಾಲೂಕಿನ ಜನತೆ ಹಾರೈಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!