Mysore
22
broken clouds
Light
Dark

ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಯೋಜನೆಗೆ ಎಲ್​&ಟಿಗೆ ಗುತ್ತಿಗೆ

ನವದೆಹಲಿ: ನೂತನ ಸಂಸತ್ ಭವನ ನಿರ್ಮಾಣ ಯೋಜನೆ ಸೆಂಟ್ರಲ್ ವಿಸ್ತಾದಡಿ ಪ್ರಧಾನಮಂತ್ರಿಗಳ ಕಾರ್ಯಾಲಯ, ಕ್ಯಾಬಿನೆಟ್ ಸೆಕ್ರೆಟರಿಯೇಟ್​ ಮತ್ತು ಇತರ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿ ಎಲ್​&ಟಿಗೆ ನೀಡಲಾಗಿದೆ. ಸಂಕೀರ್ಣವನ್ನು 1,189 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಲೋಕೋಪಯೋಗಿ ತಿಳಿಸಿದೆ.

ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಿರುವ ಬಗ್ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಗುರುವಾರ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಪ್ರಧಾನಿ ಕಾರ್ಯಾಲಯ ಸೇರಿ ಪ್ರಮುಖ ಕಚೇರಿಗಳ ಸಂಕೀರ್ಣದ ನಿರ್ಮಾಣ ಗುತ್ತಿಗೆಯನ್ನು ಎಲ್​&ಟಿಗೆ ನೀಡಲಾಗಿದೆ. ಅಂದಾಜು ವೆಚ್ಚಕ್ಕಿಂತ ಶೇಕಡಾ 10.44ರಷ್ಟು ಕಡಿಮೆ ಮೊತ್ತಕ್ಕೆ, ಅಂದರೆ 1,189 ಕೋಟಿ ರೂ.ಗೆ ನವೆಂಬರ್ 15ರಂದು ಗುತ್ತಿಗೆ ನೀಡಲಾಗಿದೆ. ಎರಡು ವರ್ಷಗಳ ಒಳಗಾಗಿ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ