Mysore
23
haze

Social Media

ಭಾನುವಾರ, 04 ಜನವರಿ 2026
Light
Dark

ಗುರುರಾಜ್ ಜಗ್ಗೇಶ್, ಕೋಮಲ್ ರೀ ಎಂಟ್ರಿ

ಜಗ್ಗೇಶ್ ಪುತ್ರನ ಹೊಸ ಚಿತ್ರ ‘ಅಮರಾವತಿ ಪೊಲೀಸ್ ಸ್ಟೇಷನ್’; ‘ಕಾಲಾಯ ನಮಃ’ ದಲ್ಲಿ ಕೋಮಲ್ ಕಮಲ್

ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ‘ಅಮರಾವತಿ ಪೊಲೀಸ್ ಸ್ಟೇಷನ್’ಎನ್ನುವ ಚಿತ್ರದ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಚಿಕ್ಕಪ್ಪ, ಜಗ್ಗೇಶ್ ಸಹೋದರ ಕೋಮಲ್ ಐದು ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ ಅದು ‘ಕಾಲಾಯ ನಮಃ’ ಚಿತ್ರದ ಮೂಲಕ.

‘ಅಮರಾವತಿ ಪೊಲೀಸ್ ಸ್ಟೇಷನ್’ ಇದು ಮೊನ್ನೆ ಸೆಟ್ಟೇರಿದ ಹೊಸ ಚಿತ್ರದ ಹೆಸರು. ಈ ಚಿತ್ರದ ಮುಖ್ಯಪಾತ್ರಧಾರಿ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್. ಅರಸೀಕೆರೆುಂ ಪುನೀತ್ ನಿರ್ದೇಶನದ ಈ ಚಿತ್ರದ ಮುಹೂರ್ತ ಆಗಿದ್ದು, ಜಗ್ಗೇಶ್ ಆರಂಭ ಫಲಕ ತೋರಿಸಿ ಶುಭ ಕೋರಿದರು. ಅಂಜನರೆಡ್ಡಿ ನಿರ್ವಾಣದ ಈ ಚಿತ್ರದಲ್ಲಿ ಗುರುರಾಜ ಅವರೊಂದಿಗೆ ರೇಖಾಶ್ರೀ, ಸುಧಾರಾಣಿ, ತಾರಾ, ನೀನಾಸಂ ಅಶ್ವಥ್, ಸಾಧುಕೋಕಿಲ ಇರಲಿದ್ದಾರೆ. ಸುರೇಶ್ ಬಾಬು ಛಾಾಂಗ್ರಹಣ, ಕಾರ್ತಿಕ್ ಸಂಗೀತ ಸಂೋಂಜನೆ ಇದೆ. ನಿರ್ದೇಶಕ ಪುನೀತ್ ಪ್ರಕಾರ ಇದು ರೈತರು ಮತ್ತು ವಾಧ್ಯಮಗಳ ಹಿನ್ನೆಲೆುಂಲ್ಲಿ ಈ ದಿನಗಳ ಕುರಿತಂತೆ ಹೇಳುವ ಚಿತ್ರ. ಮೈಸೂರು, ಬೆಂಗಳೂರು, ಮೈಸೂರು, ಸಕಲೇಶಪುರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ೋಂಜನೆ ಇದೆ.

ಕೋಮಲ್ ಕಂ ಬ್ಯಾಕ್

ಕೋಮಲ್ ಗೆ ಕೇತುದೆಸೆ ಇದೆ. ೨೦೨೨ ರವರೆಗೂ ಏನು ವಾಡಬೇಡ ಎಂದು ಹೇಳಿದ್ದೆ. ಆತ ನನ್ನ ವಾತು ಕೇಳಿ ಹಾಗೆ ನಡೆದುಕೊಂಡ. ಈಗ ಕಾಲಭೈರವನ ದೆುಂಯಿಂದ ಈ ಚಿತ್ರ ಆರಂಭಿಸಿದ್ದಾನೆ ಎಂದು ತಮ್ಮ ತಮ್ಮನ ಬಗ್ಗೆ ಹೇಳಿಕೊಂಡರು ಜಗ್ಗೇಶ್. ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿ ಪ್ರಧಾನ ಪಾತ್ರಗಳಲ್ಲೂ ನಟಿಸಿದ ಕೋಮಲ್ ಕುವಾರ್ ಕೆಲವು ವರ್ಷ ಸೋದರನ ವಾತಿನಂತೆ ಚಿತ್ರಗಳಿಂದ ದೂರವಿದ್ದರು.

ಇಷ್ಟು ಕಾಲ ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ವಾಡುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ‘ಕಾಲಾುಂ ನಮಃ’ ಶುರುವಾಗಿದೆ. ಕಾಲಭೈರವನ ಆರಾಧಕ ನಾನು. ನನ್ನ ಸಿನಿವಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀುಂ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿವಾ ಸಾಗುತ್ತದೆ ಎಂದರು ಕೋಮಲ್. ಚಿತ್ರವನ್ನು
ಕೋಮಲ್ ಅವರ ಪತ್ನಿ ಅನಸೂಯ ನಿರ್ಮಿಸುತ್ತಿದ್ದು, ಮತಿವಣನ್ ನಿರ್ದೇಶನವಿದೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್, ತಿಲಕ್, ಯತಿರಾಜ್ ತಾರಾಗಣದಲ್ಲಿದ್ದಾರೆ. ಎಮಿಲ್ ಸಂಗೀತ ಸಂಯೋಜನೆ, ರಾಕೇಶ್ ಸಿ. ತಿಲಕ್ ಛಾಯಾಗ್ರಹಣವಿರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!