Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಈ ವಾರ ಮೂರು ಚಿತ್ರಗಳ ಮೆರವಣಿಗೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್, ಅದ್ದೂರಿ ನಿರ್ಮಾಣದ, ಹೊಸ ಪ್ರತಿಭೆಯನ್ನು ಪರಿಚಯಿಸಲಿರುವ ‘ರೇಮೋ’, ನೈಜ ಘಟನೆ ಆಧರಿಸಿದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಎನ್ನುವ ಮೂರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ.

ತ್ರಿಬಲ್ ರೈಡಿಂಗ್
ಕೃಪಾಳು ಎಂಟರ್‌ಟೈನರ್ಸ್ ಲಾಂಛನದಲ್ಲಿ ರಾಮಗೋಪಾಲ್ ವೈ.ಎಂ. ನಿರ್ಮಿಸಿರುವ ಚಿತ್ರ ‘ತ್ರಿಬಲ್ ರೈಡಿಂಗ್’. ಮಹೇಶ್ ಗೌಡ ನಿರ್ದೇಶನದ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಗಣೇಶ್ ಅವರಿದ್ದು, ಅವರೊಂದಿಗೆ ಅದಿತಿ ಪ್ರಭುದೇವ, ಮೇಘ ಶೆಟ್ಟಿ ಮತ್ತು ರಚನಾ ಇಂದರ್ ತ್ರಿಬಲ್ ರೈಡಿಂಗ್ ಹೊರಟಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ರಂಗಾಯಣ ರಘು, ಅಚ್ಚುತ್ ಕುಮಾರ್, ಶೋಭರಾಜ್, ಕುರಿ ಪ್ರತಾಪ್, ಅರವಿಂದ ಬೋಳಾರ್, ರವಿಶಂಕರ್ ಗೌಡ, ಚಿತ್ಕಲ ಬಿರಾದಾರ್, ರೇಣುಕಾ ಚಿತ್ರದಲ್ಲಿದ್ದಾರೆ. ಜೈ ಆನಂದ್ ಛಾಾಂಗ್ರಹಣ, ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

‘ರೇಮೋ’
ಜಾಂದಿತ್ಯ ಫಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ನಿರ್ಮಿಸಿರುವ ಚಿತ್ರ ‘ರೇಮೋ’. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಕೇಂದ್ರಪಾತ್ರಧಾರಿ ಇಶಾನ್. ಅವರ ಜೋಡಿಯಾಗಿ ಅಶಿಕಾ ರಂಗನಾಥ್ ನಟಿಸಿದ್ದು, ರಾಜೇಶ್ ನಟರಂಗ, ಮಧು ಶಾ, ಶರತ್‌ಕುಮಾರ್ ಇತರ ಪ್ರಮುಖ ಪಾತ್ರಧಾರಿಗಳು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಿ. ಗುಣಶೇಖರನ್ ಕಲಾ ನಿರ್ದೇಶನ, ಇವ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

‘ಸದ್ದು ವಿಚಾರಣೆ ನಡೆಯುತ್ತಿದೆ’
ಎಂ.ಎಂ.ಸಿನಿವಾಸ್ ಲಾಂಛನದಲ್ಲಿ ಸುರಭಿ ಲಕ್ಷ್ಮಣ್ ನಿರ್ಮಿಸಿರುವ ಚಿತ್ರ ‘ಸದ್ದು ವಿಚಾರಣೆ ನಡೆುುಂತ್ತಿದೆ’. ಭಾಸ್ಕರ್ ಆರ್. ನೀನಾಸಂ ಚಿತ್ರಕಥೆ, ನಿರ್ದೇಶನದ ಈ ಚಿತ್ರದ ಮುಖ್ಯಪಾತ್ರಗಳಲ್ಲಿ ಪಾವನ ಗೌಡ, ರಾಕೇಶ್ ಮಯ್ಯ, ಮಧುನಂದನ್ ಇದ್ದು, ಅವರೊಂದಿಗೆ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಾಘು ಶಿವಮೊಗ್ಗ, ಜಹಾಂಗೀರ್, ರೋಹಿಣಿ ರಘುನಂದನ್ ತಾರಾಬಳಗದಲ್ಲಿದ್ದಾರೆ.

ಅಶ್ವಿನಿ ಕೆ.ಎನ್. ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ, ಪ್ರಮೋದ್ ಮರವಂತೆ ಗೀತರಚನೆ, ಕಿನ್ನಾಳ್ ರಾಜ್ ಛಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಶಶಿಧರ್ ಪಿ. ಸಂಕಲನ, ಗಂಗಮ್ ರಾಜ್ ನೃತ್ಯ ಸಂಯೋ ಜನೆ ಚಿತ್ರಕ್ಕಿದೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ