Mysore
16
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಗುರುವಾರದಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ

ಹೊಂಬಾಳೆ ಫಿಲ್ಮ್ಸ್‌ನ ಸೂಪರ್‌ಹಿಟ್‌ ಚಿತ್ರ ‘ಕಾಂತಾರ’ ಒಟಿಟಿಯಲ್ಲಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದವರಿಗೆ ಇದೀಗ ನ. 24ರಂದು ಅಮೆಜಾನ್‌ ಪ್ರೈಂ ಒಟಿಟಿ ವೇದಿಕೆಯಲ್ಲಿ ವಿಶೇಷ ಪ್ರೀಮಿಯರ್‌ ಸ್ಟ್ರೀಮಿಂಗ್‌ ನಡೆಯಲಿದೆ. 

ರಿಷಬ್‌ ಶೆಟ್ಟಿ ರಚನೆ, ನಟನೆ ಮತ್ತು ನಿರ್ದೇಶನ ಮಾಡಿರುವ ಈ ಚಿತ್ರ ಸೆಪ್ಟೆಂಬರ್‌ 30ರಂದು ತೆರೆ ಕಂಡಿತ್ತು. ಜೊತೆಗೆ ಕನ್ನಡವೊಂದರಲ್ಲೇ ಒಂದು ಕೋಟಿಗೂ ಮಿಕ್ಕಿ ಟಿಕೆಟ್‌ಗಳು ಮಾರಾಟವಾಗಿದ್ದವು ಕೂಡ.

ನಾಳೆಯಿಂದ ಅಮೆಜಾನ್‌ ಪ್ರೈಮ್‌ ಮೂಲಕ ಭಾರತ ಸೇರಿದಂತೆ 240 ದೇಶ, ಪ್ರಾಂತ್ಯಗಳಲ್ಲಿನ ಪ್ರೈಂ ಚಂದಾದಾರರು ಚಿತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳ ಆವೃತ್ತಿಗಳೂ ಲಭ್ಯ ಇವೆ ಎಂದು ಅಮೆಜಾನ್‌ ಪ್ರಕಟಣೆಯಲ್ಲಿ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!