ಮೈಸೂರು: ನಿವೃತ್ತ ಐಬಿ ಅಧಿಕಾರಿ ಕುಲಕರ್ಣಿ ಅವರ ಹತ್ಯೆಯಾದ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಆವರಣದಲ್ಲಿ ನಿರ್ಬಂಧಿಸಲಾಗಿದ್ದ ವಾಯು ವಿಹಾರಕ್ಕೆ ಮತ್ತೆ ಚಾಲನೆ ಸಿಕ್ಕಿದೆ.
ದುಷ್ಕೃತ್ಯ ನಡೆದ ದಿನದಿಂದ ವಾಯು ವಿಹಾರ ನಿರ್ಬಂಧ ಮಾಡಿದ್ದರಿಂದ ಸ್ಥಳೀಯರು, ಹಿರಿಯ ನಾಗರಿಕರಿಗೆ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಮೈಸೂರು ವಿವಿ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ನಿಬಂಧನೆಗಳೊಂದಿಗೆ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.





