Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಿಕ್ಕಲ್ಲೂರು ಕ್ಷೇತ್ರ : ಆಸ್ತಿ, ಆಡಳಿತಕ್ಕಾಗಿ ಠಾಣೆ ಮೆಟ್ಟಿಲೇರಿದ ಬಣಗಳು

ಜಾತ್ರೆ ಸಮೀಪಿಸುತ್ತಿದೆ ಈ ಬಣಗಳ ಜಗಕ್ಕೆ ನಾಂದಿಹಾಡುವಂತೆ ಗ್ರಾಮಸ್ಥರ ಒತ್ತಾಯ

ಕೊಳ್ಳೇಗಾಲ: ಪ್ರಸಿದ್ಧ ಸಿದ್ದಪ್ಪಾಜಿ ದೇವಾಲಯ ಇರುವ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಸ್ತಿ ಹಾಗೂ ಆಡಳಿತ ಸಂಬಂಧ ಎರಡು ಬಣಗಳು ಹುಟ್ಟಿಕೊಂಡಿದ್ದು ಈ ಸಂಬಂಧ ಎರಡು ಪ್ರತ್ಯೇಕ ದೂರುಗಳು ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠ ಮತ್ತು ಚಿಕ್ಕಲ್ಲೂರು ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿದ್ದ ಪ್ರಭುದೇವರಾಜೇ ಅರಸ್ ಮಗ ಭರತ್‌ರಾಜೇ ಅರಸ್ ನಡುವೆ ವಿವಾದ ಹುಟ್ಟಿಕೊಂಡಿದ್ದು ಭರತ್ ರಾಜೇ ಅರಸ್ ರವರನ್ನು ಇಲ್ಲಿಂದ ಪದಚ್ಯುತಿಗೊಳಿಸಲು ಜ್ಞಾನನಂದ ಅರಸ್‌ರವರ ಪತ್ನಿ ಸಮ್ಮತಿ ಅರಸ್ ತಮ್ಮ ದಾಖಲಾತಿಗಳೊಡನೆ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅದೇ ರೀತಿ ಭರತ್‌ರಾಜೇ ಅರಸ್‌ರವರು ಕೂಡ ತಮ್ಮ ತಂದೆಯ ಕಾಲದಿಂದಲೂ ಆಡಳಿತ ನಡೆಸುತ್ತಿರುವುದಾಗಿ ತಮ್ಮ ದಾಖಲಾತಿಗಳನ್ನು ಠಾಣೆಗೆ ನೀಡಿದ್ದಾರೆ. ಎರಡು ಗುಂಪುನಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕೆಂದು ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಕಳೆದ ತಿಂಗಳು ಇದೇ ಸಂಬಂಧ ಚಿಕ್ಕಲ್ಲೂರು ದೇವಸ್ಥಾನಕ್ಕೆ ಸೇರಿದ ಸಾಮಗ್ರಿಗಳು ತುಂಬಿದ್ದ ಗೋಡೌನ್‌ಗೆ ಬೆಂಕಿ ಹಾಕಿ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಕೂಡ ಠಾಣೆಯಲ್ಲಿ ದೂರು ದಾಖಲಾಗಿದೆ.
ಜನವರಿ ತಿಂಗಳು ಐದು ದಿನಗಳ ಜಾತ್ರೆ ಇರುವುದರಿಂದ ಜಿಲ್ಲಾಡಳಿತ ಅಷ್ಟರೊಳಗೆ ಎರಡು ಬಣಗಳ ನಡುವೆ ಇರುವ ವೈಮನಸ್ಸುಗಳಿಗೆ ನಾಂದಿ ಹಾಡಬೇಕೆಂಬುದು ಈ ಜನರ ಒತ್ತಾಯವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ