Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆರೋಗ್ಯಯುವ ಬದುಕು ಬಹಳ ಮುಖ್ಯ: ಪ್ರತಾಪ್ ಸಿಂಹ

‘ನಮ್ಮ ಮೈಸೂರು-ಫಿಟ್ ಮೈಸೂರು’ ಕಾರ್ಯಕ್ರಮ ಉದ್ಘಾಟನೆ

ಮೈಸೂರು: ಜೀವನದಲ್ಲಿ ಆಸ್ತಿ, ಪಾಸ್ತಿ, ಹಣ ಸಂಪಾದನೆ ಮಾಡುವ ಭರದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಕಷ್ಟವಾಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಜತೆಗೆ ಆರೋಗ್ಯವಂತ ಜೀವನ ಬಹಳ ಮುಖ್ಯವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.


ನಗರದ ಸರಸ್ವತಿಪುರಂನಲ್ಲಿರುವ ವಿಜಯವಿಠಲ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮೈಸೂರು ಜಿಮ್ ಅಂಡ್ ಫಿಟ್ನೆಸ್ ಮಾಲೀಕರ ಸಂಘ, ನಾರಾುಂಣ ಹೃದಯಾಲಯ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ‘ನಮ್ಮ ಮೈಸೂರು-ಫಿಟ್ ಮೈಸೂರು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕುಸ್ತಿ, ಯೋಗದ ಜತೆಗೆ ವ್ಯಾಯಾಮ ಮಾಡುವ ಹವ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಹಾರಾಜರ ಕಾಲದಿಂದಲೂ ಮೈಸೂರು ಕುಸ್ತಿಗೆ ಹೆಸರು ವಾಸಿಯಾಗಿದೆ. ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರು ಮಹಾರಾಜರು ಮೈಸೂರು ಸಾಂಸ್ಕೃತಿಕ ನಗರವಾಗಿ ರೂಪುಗೊಳ್ಳುವಂತೆ ಮಾಡಲು ಕಾರಣಕರ್ತರು. ಇಂದು ಮೈಸೂರಿನ ಯಾವುದೇ ಮೊಹಲ್ಲಾಗಳಿಗೆ ಹೋದರೂ ಗರಡಿ ಮನೆಗಳು, ಪೈಲ್ವಾನರು ಅಭ್ಯಾಸ ಮಾಡುತ್ತಿರುವುದನ್ನು ನೋಡಬಹುದು. ಮೈಸೂರು ಯೋಗ ಸಿಟಿಯಾಗಿದೆ. ಮಹಾರಾಜರ ಕಾಲದಿಂದಲೂ ಯೋಗ ಮುಂದುವರಿದಿದ್ದರಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೈಸೂರಿಗೆ ಬಂದು ಯೋಗಾಭ್ಯಾಸ ಮಾಡಲು ಕಾರಣವಾಯಿತು ಎಂದು ಸ್ಮರಿಸಿದರು.
ಶಾಸಕ ಎಲ್.ನಾಗೇಂದ್ರ, ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ೋಂಗ ಫೆಡರೇಶನ್ ಅಧ್ಯಕ್ಷ ಶ್ರೀಹರಿ, ನಾರಾಯಣ ಹೃದಯಾಲಯ ಮುಖ್ಯ ಹೃದ್ರೋಗ ತಜ್ಞ ಡಾ.ಕೇಶವಮೂರ್ತಿ, ಮೈಸೂರು ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಹರ್ಷ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಸ್ಪರ್ಧೆ, ಜಿಂಬಾ ಡ್ಯಾನ್ಸ್, ಮಕ್ಕಳ ವಿಶೇಷ ನೃತ್ಯ, ಮ್ಯೂಸಿಕ್ ಯೋಗ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಫ್ಯೂಷನ್, ದೇಹದಾರ್ಢ್ಯ ಪ್ರದರ್ಶನ ನಡೆದು ನೆರೆದಿದ್ದವರ ಗಮನ ಸೆಳೆಯಿತು.


ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಗಮನಿಸದಿರುವ ಕಾರಣ ಅಕಾಲಿಕ ಮರಣಕ್ಕೀಡಾಗುತ್ತಿರುವುದನ್ನು ನೋಡಿದ್ದೇವೆ. ಹಾಗಾಗಿ, ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಬೇಕು.

-ಪ್ರತಾಪ್ ಸಿಂಹ, ಸಂಸದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ