Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಿದೇಶಿ ಪ್ರತಿನಿಧಿಗಳಿಂದ ಪಾಲಿಕೆ ಆಡಳಿತ ಅಧ್ಯಯನ

ಮೈಸೂರು: ಮೈಸೂರು ಮಹಾನಗರಪಾಲಿಕೆಯ ಆಡಳಿತ ಹಾಗೂ ಕಾರ್ಯವೈಖರಿ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಶುಕ್ರವಾರ ವಿವಿಧ ರಾಷ್ಟ್ರಗಳ ೨೨ ಮಂದಿ ಅಧಿಕಾರಿಗಳು ನಗರಪಾಲಿಕೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಶುಕ್ರವಾರ ಬೆಳಿಗ್ಗೆ ನಗರಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಉಪ ಮಹಾಪೌರರಾದ ಡಾ.ಜಿ.ರೂಪ ಅವರು ಸೌತ್ ಸುಡಾನ್, ಉಗಾಂಡಾ, ತಜಕಿಸ್ತಾನ್, ತಾಂಜೇನಿಯಾ, ಕೀನ್ಯಾ ಹಾಗೂ ಶ್ರೀಲಂಕಾ ಮುಂತಾದ ದೇಶಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಅಧಿಕಾರಿಗಳನ್ನು ಸ್ವಾಗತಿಸಿದರು.

ಮೈಸೂರು ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರ. ಸ್ವಚ್ಛತೆುಂಲ್ಲಿ ದೇಶದಲ್ಲಿಯೇ ಮೊದಲ ನಗರ ಎಂಬ ಬಿರುದನ್ನು ಪಡೆದಿದೆ. ಮೈಸೂರನ್ನು ಆಳಿದ ಮಹಾರಾಜರ ಕೊಡುಗೆ ಸಾಕಾಷ್ಟಿದೆ. ಇಲ್ಲಿನ ಅರಮನೆಗಳು, ಆಹಾರ ಪದ್ಧತಿ ಸಾಕಷ್ಟು ಮಂದಿಯನ್ನು ಸೆಳೆದಿದೆ ಎಂಬಿತ್ಯಾದಿ ವಿಷಯಗಳನ್ನು ಗಣ್ಯರಿಗೆ ವಿವರಿಸಿದರು.

ನಗರಪಾಲಿಕೆಯ ಆಡಳಿತದ ಬಗ್ಗೆ ವಿವರಿಸಿದ ಹೆಚ್ಚುವರಿ ಆಯುಕ್ತರಾದ ಸವಿತಾ ಅವರು, ಮೈಸೂರು ಸ್ವಚ್ಛತೆಯಲ್ಲಿ ಈ ಬಾರಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಮೈಸೂರು ೬೫ ವಾರ್ಡ್‌ಗಳನ್ನು ಹೊಂದಿದ್ದು, ಜನಪ್ರತಿನಿಧಿಗಳ ಸಹಕಾರ ಇನ್ನಿತರೆ ವಿಚಾರಗಳನ್ನು ತಿಳಿಸಿದರು.

ಪರಿಸರ ಇಂಜಿನಿುಂರ್ ಮೈತ್ರಿ ಅವರು ಮೈಸೂರಿನ ೬೫ ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುವ ತಾಜ್ಯವನ್ನು ಹೇಗೆ ಸಮರ್ಥವಾಗಿ ವಿಲೇವಾರಿ ಮಾಡಲಾಗುತ್ತಿದೆ. ಪ್ರತಿದಿನ ಎಷ್ಟು ತಾಜ್ಯ ಉತ್ಪತ್ತಿಯಾಗುತ್ತಿದೆ. ಪೌರಕಾರ್ಮಿಕರ ಪಾತ್ರವೇನು? ಎಂಬುದನ್ನು ಪ್ರಾತ್ಯಕ್ಷಿಕೆಯ ಸಮೇತ ವಿವರಿಸಿದರು.

ಕಂದಾಯ ಅಧಿಕಾರಿ ದಾಸೇಗೌಡ ಅವರು, ಮೈಸೂರು ನಗರದಾದ್ಯಂತ ಆಸ್ತಿ ತೆರಿಗೆುಂನ್ನು ಸಂಗ್ರಹಿಸುವ ಬಗೆ, ಕಂದಾಯ ನಿಗದಿಗೆ ಮಾನದಂಡ, ಆನ್‌ಲೈನ್ ಮೂಲಕ ಕಂದಾಯ ಪಾವತಿಸಿಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದರು.

ನಗರಪಾಲಿಕೆಗೆ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ನಗರಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಉಳಿತಾಯವಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.

ಸಭೆಯಲ್ಲಿ ಹಾಜರಿದ್ದ ವಿವಿಧ ದೇಶಗಳ ಪ್ರತಿನಿಧಿಗಳು, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಅನುವಾನಗಳನ್ನು ಪರಿಹರಿಸಿಕೊಂಡರು. ನಂತರ ಅರಮನೆ ಹಾಗೂ ಜಿಲ್ಲಾ ಪಂಚಾಯಿತಿಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ಸಾದರು. ಹೆಚ್ಚುವರಿ ಆಯುಕ್ತ ಜಿ.ಸೋಮಶೇಖರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರತಿವರ್ಷ ವಿವಿಧ ದೇಶಗಳ ಪ್ರತಿನಿಧಿಗಳನ್ನು ಭಾರತಕ್ಕೆ ಆಹ್ವಾನಿಸಿ ಇಲ್ಲಿನ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತದೆ. ಅದರಂತೆ ಈ ಬಾರಿ ೨೨ ಮಂದಿ ರಾಷ್ಟ್ರಮಟ್ಟದ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿದ್ದು, ಪ್ರತಿನಿಧಿಗಳು ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ