Mysore
20
overcast clouds

Social Media

ಶುಕ್ರವಾರ, 02 ಜನವರಿ 2026
Light
Dark

ಅರ್ಜುನ ಪ್ರಶಸ್ತಿ ವಿಜೇತ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ನಾಯಕ ಅಬ್ಬಾಸ್ ಇನ್ನಿಲ್ಲ

ಬೆಂಗಳೂರು/ಮುಂಬೈ: ಭಾರತ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ನಾಯಕ ಗುಲಾಮ್ ಅಬ್ಬಾಸ್ ಮುಂತಾಸಿರ್ (80) ದೀರ್ಘ ಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ರಾತ್ರಿ ಮುಂಬೈನಲ್ಲಿ ನಿಧನರಾದರು.
ಅವರಿಗೆ ಪತ್ನಿ, ಮಗಳು ಹಾಗೂ ಅಣ್ಣ ಇದ್ದಾರೆ.

1969 ಹಾಗೂ 1975ರಲ್ಲಿ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಅಬ್ಬಾಸ್ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. 1970ರಲ್ಲಿ ಅವರು ಏಷ್ಯನ್ ಆಲ್‌ ಸ್ಟಾರ್ ತಂಡದಲ್ಲಿಯೂ ಸ್ಥಾನ ಪಡೆದಿದ್ದರು.  ಅದೇ ವರ್ಷ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

ಮಿಂಚಿನ ವೇಗದ ಆಟಕ್ಕೆ ಹೆಸರಾಗಿದ್ದ ಅಬ್ಬಾಸ್ ಅವರದ್ದು ಬ್ಯಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಅಚ್ಚಳಿಯದ ಹೆಸರು. 5.11 ಅಡಿ ಎತ್ತರವಿದ್ದ ಅವರ  ಆಟದ ಶೈಲಿಯು ಜನಪ್ರಿಯವಾಗಿತ್ತು. ಮುಂಬೈ ಹಾಗೂ ರೈಲ್ವೆ ತಂಡಗಳ ಪ್ರಮುಖ ಆಟಗಾರರಾಗಿದ್ದರು.

ಅಬ್ಬಾಸ್ ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!