ಚಾಮರಾಜನಗರ: ಇಲ್ಲಿನ ಸಾರ್ವಜನಿಕ ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗವನ್ನು ಸಿಮ್ಸ್‌ಗೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದವರು ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.
ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಶಾಸಕ ವಾಟಾಳ್ ನಾಗರಾಜ್ ಮಾತನಾಡಿ, ಸ್ಥಳಾಂತರ ಮಾಡಿದ್ದೇ ಆದಲ್ಲಿ ಚಾ.ನಗರ ಬಂದ್ ಮಾಡುವುದಾಗಿ ಎಚ್ಚರಿಸಿದರು.
ಮೆಡಿಕಲ್ ಕಾಲೇಜು ಆಸ್ಪತ್ರೆ ಸುಮಾರು ೮ ಕಿ.ಮೀ. ದೂರದಲ್ಲಿದ್ದು ಈ ಆಸ್ಪತ್ರೆ ಸ್ಥಳಾಂತರ ಮಾಡಿದರೆ ಹೊರರೋಗಿಗಳಿಗೆ ತೊಂದರೆಯಾಗುತ್ತದೆ ಎಂದರು.
ಕೇಸರಿ ಬಣ್ಣವನ್ನು ಶಾಲೆಯ ಬದಲಿಗೆ ಸಚಿವ ಸಂಪುಟ ಬಳಿದುಕೊಳ್ಳಲಿ. ಕನ್ನಡ ಶಾಲೆಯನ್ನು ಮುಚ್ಚಿದ್ದಾರೆ. ಖಾಸಗಿ ಕನ್ನಡ ಶಾಲೆಗಳಿಗೆ ಅನುದಾನ ನೀಡಿಲ್ಲ. ಕನ್ನಡವನ್ನು ಕಡೆಗಣಿಸಿರುವ ರಾಜ್ಯ ಸರ್ಕಾರ ವಿವೇಕ ಎಂಬ ಹೊಸ ಚಿಂತನೆ ಮಾಡಿದೆ ಎಂದು ಕಿಡಿಕಾರಿದರು.
ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಎಲ್. ಶಿವಲಿಂಗಮೂರ್ತಿ, ಚಾ.ರಾ.ಕುಮಾರ್, ರವಿಚಂದ್ರಪ್ರಸಾದ್ ಕಹಳೆ, ರೇವಣ್ಣಸ್ವಾಮಿ, ಅಜ್ಯ್, ಪಾರ್ಥಸಾರಥಿ, ಅಂಬರೀಶ್, ಬಸಪ್ಪನಪಾಳ್ಯ ಕುಮಾರ್, ವಿನೋದ್, ಸಾಗರ್‌ರಾವತ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





