Mysore
27
clear sky

Social Media

ಭಾನುವಾರ, 04 ಜನವರಿ 2026
Light
Dark

ಕಟೀಲು ಕ್ಷೇತ್ರದಲ್ಲಿ ನಟಿ ಸಪ್ತಮಿ ಗೌಡ ಪೂಜೆ

ಮಂಗಳೂರು: ದೇಶಾದ್ಯಂತ ಭರ್ಜರಿ ಯಶಸ್ಸು ಗಳಿಸಿದ ‘ಕಾಂತಾರ’ ಸಿನಿಮಾದ ನಾಯಕಿ ಸಪ್ತಮಿ ಗೌಡ ಅವರು ಮಂಗಳವಾರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.  ಕಟೀಲು ಕ್ಷೇತ್ರದಲ್ಲಿ ಪ್ರತೀ ಮಂಗಳವಾರ ಮತ್ತು ಶುಕ್ರವಾರ ನಡೆಯುವ ಹೂವಿನ ಪೂಜೆ  ಪ್ರಸಿದ್ಧಿ ಪಡೆದಿದೆ.

ಕಾಂತಾರ ಸಪ್ತಮಿ ಗೌಡ  ಅವರ ಎರಡನೇ ಸಿನಿಮಾ. ಈ ಚಿತ್ರದ ಮೂಲಕ ದೇಶಾದ್ಯಂತ ಜನಪ್ತಿಯತೆ ಪಡೆದ ಅವರು  ಮುಂದಿನ ಸಿನಿಮಾದ ಕೆಲಸಗಳು ಆರಂಭ ಆಗುವುದಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ವೇಳೆ ಅವರರ ತಾಯಿ ಸೇರಿದಂತೆ  ಕುಟುಂಬ ವರ್ಗದವರು ಸಾಥ್ ನೀಡಿದರು.

ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. ಕಾಂತಾರ ಚಿತ್ರ ಮಾಡುವಾಗ ತಿಳಿಯಿತು ಎಂದು ಸಪ್ತಮಿ ಗೌಡ ತಿಳಿಸಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!