Mysore
25
mist

Social Media

ಶನಿವಾರ, 19 ಅಕ್ಟೋಬರ್ 2024
Light
Dark

ವರಾಹ ರೂಪಂ ಹಾಡು ಯೂ ಟ್ಯೂಬ್ನಿಂದ ಡಿಲೀಟ್ !

ಬೆಂಗಳೂರು: ಅತ್ಯಂತ ಜನಪ್ರಿಯವಾಗಿದ್ದ ಕಾಂತಾರಂ ಚಿತ್ರದ ವರಾಹ ರೂಪಂ ಹಾಡನ್ನು ಯೂಟ್ಯೂಬ್‌ ನಿಂದ ತೆಗೆದು ಹಾಕಲಾಗಿದೆ. ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ (Thaikkudam Bridge) ತಮ್ಮ ಹಾಡಿನ ಟ್ಯೂನ್ ಕಾಪಿ ಮಾಡಿ ವರಾಹ ರೂಪಂನಲ್ಲಿ ಬಳಸಲಾಗಿದೆ ಎಂದು ಆರೋಪಿಸಿತ್ತು. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ವೈರಲ್ ಆಗಿದ್ದ ಈಗ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಂದ ಡಿಲೀಟ್ ಆಗಿದೆ. ನವೆಂಬರ್ 11ರಿಂದ ಹಲವಾರು ಸೋಷಿಯಲ್ ಮೀಡಿಯಾದ ಅಕೌಂಟ್ಗಳಿಂದ ಈ ಹಾಡು ಡಿಲೀಸ್ ಆಗಿದ್ದು ಕೋರ್ಟ್ ಆದೇಶಕ್ಕೆ ಕಾಂತಾರ ತಂಡ ಈ ಕ್ರಮ ಕೈಗೊಂಡಿದೆಯಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಮ್ಯೂಸಿಕ್ ಆ್ಯಪ್ಗಳಲ್ಲಿಲ್ಲ ಹಾಡು
ಮ್ಯೂಸಿಕ್ ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಕಾಪಿ ರೈಟ್ ಎನ್ನುವುದು ಸೂಕ್ಷ್ಮ ಸಂಗತಿ. ಹಾಡು, ಕಂಟೆಂಟ್ಗಳು ಕಾಪಿ ಆದಾಗ ಅದರ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗುತ್ತದೆ. ಹಾಡನ್ನು ಪ್ಲೇ ಮಾಡದಂತೆ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಈಗ ಹಾಡನ್ನು ಎಲ್ಲೆಡೆ ಡಿಲೀಟ್ ಮಾಡಲಾಗುತ್ತಿದೆ.

ಕೇರಳದ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಹಾಡನ್ನು ಬಳಸದಂತೆ ಕಾಂತಾರ ತಂಡಕ್ಕೆ ಆದೇಶ ಹೊರಡಿಸಿತ್ತು. ಈಗ ಈ ಆದೇಶಕ್ಕೆ ಚಿತ್ರತಂಡ ತಲೆಬಾಗಿದ್ದು ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್, ಗಾನ ಮೊದಲಾದ ಪ್ಲಾಟ್ಫಾರ್ಮ್ಗಳಿಂದ ಈ ಸಾಂಗ್ ಡಿಲೀಟ್ ಮಾಡಲಾಗಿದೆ.

ಸಾಂಗ್ ಕಾಪಿ ಮಾಡಿಲ್ಲ ಎನ್ನುವುದೇ ವಾದ
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ಗಳಲ್ಲಿ ವರಾಹ ರೂಪಂ ಸಾಂಗ್ ಅಪ್ಲೋಡ್ ಮಾಡಲಾಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್ ಜಿಯೊ ಸಾವನ್ನಲ್ಲಿ ಈ ಹಾಡು ಕೇಳಲು ಲಭ್ಯವಿಲ್ಲ.

 

ಟ್ಯೂನ್ ಕದ್ದಿಲ್ಲ ಎಂದಿದ್ದ ಅಜನೀಶ್

ಅಜನೀಶ್ ಅವರು ಹಾಡಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಈ ಹಾಡನ್ನು ಕಾಪಿ ಮಾಡಿಲ್ಲ ಎಂದು ಹೇಳಿದ್ದರು. ಈ ರಾಗಗಳು ಭಿನ್ನವಾಗಿದೆ ಎಂದು ಹೇಳಿದ್ದರು.
ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್
ಕೇರಳದ ಮ್ಯೂಸಿಕ್ ಬ್ಯಾಂಡ್ ತೈಕ್ಕುಡಂ ಬ್ರಿಡ್ಜ್ ಯುವಕರ ತಂಡವಾಗಿದ್ದು ಇದಕ್ಕೆ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿವೆ. ಸಂಗೀತ ಪ್ರಿಯರು ಹಾಡುಗಳನ್ನು ಇಲ್ಲಿ ಪೋಸ್ಟ್ ಮಾಡುತ್ತಾರೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳೂ ಇದ್ದಾರೆ. ಇದೇ ತಂಡ ನವರಸಂ ಎನ್ನುವ ಹಾಡನ್ನು ತಯಾರಿಸಿತ್ತು. ಈ ಹಾಡು ವರಾಹ ರೂಪಂ ಸಾಂಗ್ನ ಅದೇ ಟ್ಯೂನ್ ಹೋಲುತ್ತಿದ್ದು ಈ ಕಾರಣದಿಂದ ವಿವಾದ ತಲೆದೋರಿದೆ. ನವರಸಂ ಹಾಡು ನಿಧಾನವಾಗಿದ್ದರೆ ವರಾಹ ರೂಪಂ ಹಾಡು ಕೊಂಚ ವೇಗವಾಗಿ ಹೆಚ್ಚಿನ ಮ್ಯೂಸಿಕ್ ಬಳಸಿ ಮಾಡಿರುವಂತೆ ಕೇಳಿ ಬರುತ್ತಿದೆ ಎನ್ನುವುದು ಸಂಗೀತ ಪ್ರಿಯರ ಅಭಿಪ್ರಾಯ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ