Mysore
24
overcast clouds

Social Media

ಗುರುವಾರ, 01 ಜನವರಿ 2026
Light
Dark

ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ : ಫಾ.ಮದಲೈ

ಹನೂರು : ವಿದ್ಯಾರ್ಥಿಗಳು ಪಠ್ಯದ ಜೊತೆಗೆ  ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ  ಎಂದು ಫಾ.ಮದಲೈ  ಮುತ್ತು ತಿಳಿಸಿದರು.

ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಹಮ್ಮಿಕೊಂಡಿದ್ದ  ಮೈಸೂರು  ಧರ್ಮ ಕ್ಷೇತ್ರದ  ಶಿಕ್ಷಣ ಸಂಸ್ಥೆಗಳ ಜಿಲ್ಲಾ ಮಟ್ಟದ ಶಾಲಾ ಹಾಗೂ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಕ್ರೀಡೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ತುಂಬಾ ಅನುಕೂಲ ಆಗಲಿದೆ. ಎಲ್ಲರೂ ಭಾಗವಹಿಸಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.

ಕ್ರಿಸ್ತರಾಜ ಶಾಲೆಯ ವ್ಯವಸ್ಥಾಪಕರಾದ ಫಾ. ರೋಷನ್ ಬಾಬು ಮಾತನಾಡಿ ಇಂದು ಮಕ್ಕಳು ಎಲ್ಲರೂ ಬಹಳ ಆಸಕ್ತಿಯಿಂದ ಭಾಗವಹಿಸಿದ್ದು ಗೆಲ್ಲುವ ಕಾತುರ ಎಲ್ಲರಲ್ಲೂ ಕಾಣುತ್ತಿದೆ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.

ನಾಗವಳ್ಳಿ ,ಮಾದಪುರ,ಜಾಗೇರಿ, ಕೊಳ್ಳೇಗಾಲ ,ಕಾಮಗೆರೆ ,
ತೋಮಿಯರಪಾಳ್ಯ,ಮಾರ್ಟಳ್ಳಿಕೌದಳ್ಳಿ,ಸಂದನಪಾಳ್ಯ ,ಹನೂರು ಸೇರಿದಂತೆ ಇನ್ನಿತರ
ಎಮ್ ಡಿ ಇಎಸ್  ವಿದ್ಯಾಸಂಸ್ಥೆಗಳ ಬಾಲಕರ ಹಾಗೂ ಬಾಲಕೀಯರ  32 ತಂಡಗಳ ಭಾಗವಹಿಸಿದ್ದವು.

ಇದೇ  ಸಂದರ್ಭದಲ್ಲಿ  ಫಾ. ಸಬಸ್ಟೀಯನ್ , ಫಾ. ಟೆನ್ನಿಕುರಿಯನ್,ಫಾ. ಸೂಸೈ,ಹಾಗೂ ಶಿಕ್ಷಕರು ಮಕ್ಕಳು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!