ಸಿಡ್ನಿ: ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಇರುವ ನ್ಯೂ ಸೌತ್ ವೇಲ್ಸ್ ರಾಜಧಾನಿಯಾಗಿರುವ ಸಿಡ್ನಿ ನಗರದ ಬಂದರಿನಲ್ಲಿ ನಿಲ್ಲಿಸಲಾಗಿರುವ ‘ಮೆಜೆಸ್ಟಿಕ್ ಪ್ರಿನ್ಸಸ್‘ ಹಡಗಿನಲ್ಲಿ ಬರೋಬ್ಬರಿ 800 ಮಂದಿ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.
ಹೀಗಾಗಿ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಆಸ್ಟ್ರೇಲಿಯಾದ ಗೃಹ ಮಂತ್ರಾಲಯ ನಾಗರಿಕರಿಗೆ ಸೂಚನೆ ನೀಡಿದೆ. ಹಡಗಿನಲ್ಲಿ ನೂರಾರು ಜನರಿಗೆ ಕೋವಿಡ್ ಪತ್ತೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಹೀಗೆ ಈ ಪ್ರಕರಣವನ್ನು ಆಸ್ಟ್ರೇಲಿಯಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.