Mysore
23
mist

Social Media

ಶನಿವಾರ, 10 ಜನವರಿ 2026
Light
Dark

ಕಬ್ಬು ಬೆಳೆಗಾರರಿಂದ ಅಣಕು ಶವಯಾತ್ರೆ

ಮೈಸೂರು: ಕಬ್ಬು ಬೆಳೆಗಾರರ ಸಂಘದ ಪ್ರತಿಭಟನೆ 10 ನೇ ದಿನಕ್ಕೆ ಕಾಲಿಟ್ಟಿದ್ದು, ಬುದವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಣುಕು ಶವಯಾತ್ರೆ ಚಳುವಳಿ ನಡೆಸುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅಣಕು ಶವ ಯಾತ್ರೆಯನ್ನು ಜಿಲ್ಲಾಧಿಕಾರಿ ಕಚೇರಿಯ ಧರಣಿ ಸ್ಥಳದಿಂದ ಪ್ರಾರಂಭ ಮಾಡಲಾಯಿತು. ನಂತರ ಮಹಾರಾಣಿ ಕಾಲೇಜು ಮೂಲಕ ಹಾದು ಮೆಟ್ರೋ ಪೋಲ್ ವೃತ್ತದ ಮುಖಾಂತರ ಅಣಕು ಶವಯಾತ್ರೆಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತರಲಾಯಿತು.

ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ 10 ದಿನಗಳಿಂದ ಕಬ್ಬಿನ ಎಫ್‌ಆರ್‌ಪಿ ಪುನರ್ ಪರಿಶೀಲನೆ ಆಗಬೇಕು, ಚುಂಚರಾಯನಹುಂಡಿ ಗ್ರಾಮದ ಸುತ್ತಮುತ್ತಲಿನ ರೈತರಿಗೆ ಬಗರ್ ಹುಕುಂ ಸಾಗುವಳಿ ಪತ್ರ ತಕ್ಷಣ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರುಗಳು ಕೇವಲ ಜಾಣ ಕುರುಡರಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಾಗಿದ್ದಾರೆ. ಹೀಗಾಗಿ ರೈತರ ಪಾಲಿಗೆ ಇವರುಗಳು ಮತ್ತು ಸರ್ಕಾರ ಸತ್ತು ಹೋಗಿದೆ. ಇವರುಗಳು ಅನಾಥ ಶವವಾಗಿದ್ದಾರೆ ಈ ಶವಗಳನ್ನು ಜಿಲ್ಲಾಡಳಿತ ಸ್ವೀಕಾರ ಮಾಡಬೇಕು ಎಂದು ಹೇಳಿದರು.

ಅನಾಥರಂತೆ ಬಂದು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಲೆಬಾಗಿ ಮತವನ್ನು ಪಡೆಯುವ ಅವರುಗಳು ಇಂದು ಅನ್ನದಾತ ಬೀದಿಯಲ್ಲಿ ಕುಳಿತು ಚಳುವಳಿಯನ್ನು ಮಾಡುವಾಗ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ, ಮಂತ್ರಿಗಳು, ಎಂಎಲ್‌ಎಗಳು, ಎಂಪಿಗಳು, ವಿರೋಧ ಪಕ್ಷದ ಶಾಸಕರುಗಳು ರೈತರ ಪಾಲಿಗೆ ಸತ್ತಿರುವುದರಿಂದ ನೀವೇ ಇವರಿಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಧರಣಿ ನಿರತರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಗಳು ಈ ಶವವನ್ನು ಸ್ವೀಕರಿಸಬೇಕು ಏಕೆಂದರೆ ಬೇರೆ ಬೇರೆ ರಾಜ್ಯಗಳಲ್ಲಿ 4500 ರೂಗಳವರೆಗೆ ಹಣವನ್ನು ಕಬ್ಬು ಬೆಳೆಗಾರರಿಗೆ 1500 ಮಾತ್ರ ಉಳಿಯುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಹಾಡ್ಯ ರವಿ, ಕುರಬೂರು ಸಿದ್ದೇಶ್, ಪಟೇಲ್ ಶಿವಮೂರ್ತಿ, ಮೂಕಹಳ್ಳಿ ಮಹದೇವಸ್ವಾಮಿ, ಹಾಲಿನ ನಾಗರಾಜ್, ಉಡಿಗಾಲ ಗ್ರಾಮ ಘಟಕದ ಮಂಜುನಾಥ್, ಗುರು, ಮಲ್ಲಪ್ಪ, ರೇವಣ್ಣ, ಮಹದೇವಸ್ವಾಮಿ, ಮಹಾದೇವಸ್ವಾಮಿ, ರಾಜು, ಸುಧಾಕರ್, ಶಿವು, ಮಲಿಯೂರು ಘಟಕದ ಬಸವರಾಜಪ್ಪ, ಹರ್ಷಕುಮಾರ್, ಕಾಳಪ್ಪ, ನಂಜುಂಡ ನಾಯಕ, ಮಲ್ಲೇಗೌಡ, ಮಂಜುನಾಥ, ಮಾದಪ್ಪ, ಕನಕ ಹಳ್ಳಿ ಬಸವಣ್ಣ, ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಚುಂಚರಾಯನ ಹುಂಡಿ ಸಿದ್ದರಾಮಯ್ಯ, ನಂಜುಂಡಸ್ವಾಮಿ, ರಾಜಣ್ಣ, ಮಾರ್ಬಳ್ಳಿ ನೀಲಕಂಠಪ್ಪ ಇನ್ನು ಮುಂತಾದವರು ಇದ್ದರು.
ಮೈಸೂರು: ಕಬ್ಬು ಬೆಳೆಗಾರರ ಸಂಘದ ಪ್ರತಿಭಟನೆ ೧೦ನೇ ದಿನಕ್ಕೆ ಕಾಲಿಟ್ಟಿದ್ದು, ಬುದವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಣುಕು ಶವಯಾತ್ರೆ ಚಳುವಳಿ ನಡೆಸುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅಣಕು ಶವ ಯಾತ್ರೆಯನ್ನು ಜಿಲ್ಲಾಧಿಕಾರಿ ಕಚೇರಿಯ ಧರಣಿ ಸ್ಥಳದಿಂದ ಪ್ರಾರಂಭ ಮಾಡಲಾಯಿತು. ನಂತರ ಮಹಾರಾಣಿ ಕಾಲೇಜು ಮೂಲಕ ಹಾದು ಮೆಟ್ರೋ ಪೋಲ್ ವೃತ್ತದ ಮುಖಾಂತರ ಅಣಕು ಶವಯಾತ್ರೆಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತರಲಾಯಿತು.

ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ 10 ದಿನಗಳಿಂದ ಕಬ್ಬಿನ ಎಫ್‌ಆರ್‌ಪಿ ಪುನರ್ ಪರಿಶೀಲನೆ ಆಗಬೇಕು, ಚುಂಚರಾಯನಹುಂಡಿ ಗ್ರಾಮದ ಸುತ್ತಮುತ್ತಲಿನ ರೈತರಿಗೆ ಬಗರ್ ಹುಕುಂ ಸಾಗುವಳಿ ಪತ್ರ ತಕ್ಷಣ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರುಗಳು ಕೇವಲ ಜಾಣ ಕುರುಡರಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಾಗಿದ್ದಾರೆ. ಹೀಗಾಗಿ ರೈತರ ಪಾಲಿಗೆ ಇವರುಗಳು ಮತ್ತು ಸರ್ಕಾರ ಸತ್ತು ಹೋಗಿದೆ. ಇವರುಗಳು ಅನಾಥ ಶವವಾಗಿದ್ದಾರೆ ಈ ಶವಗಳನ್ನು ಜಿಲ್ಲಾಡಳಿತ ಸ್ವೀಕಾರ ಮಾಡಬೇಕು ಎಂದು ಹೇಳಿದರು.

ಅನಾಥರಂತೆ ಬಂದು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ತಲೆಬಾಗಿ ಮತವನ್ನು ಪಡೆಯುವ ಅವರುಗಳು ಇಂದು ಅನ್ನದಾತ ಬೀದಿಯಲ್ಲಿ ಕುಳಿತು ಚಳುವಳಿಯನ್ನು ಮಾಡುವಾಗ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ, ಮಂತ್ರಿಗಳು, ಎಂಎಲ್‌ಎಗಳು, ಎಂಪಿಗಳು, ವಿರೋಧ ಪಕ್ಷದ ಶಾಸಕರುಗಳು ರೈತರ ಪಾಲಿಗೆ ಸತ್ತಿರುವುದರಿಂದ ನೀವೇ ಇವರಿಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಧರಣಿ ನಿರುತರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿಗಳು ಈ ಶವವನ್ನು ಸ್ವೀಕರಿಸಬೇಕು ಏಕೆಂದರೆ ಬೇರೆ ಬೇರೆ ರಾಜ್ಯಗಳಲ್ಲಿ 4500 ರೂಗಳವರೆಗೆ ಹಣವನ್ನು ಕಬ್ಬು ಬೆಳೆಗಾರರಿಗೆ ನೀಡಲಾಗುತ್ತಿದೆ ಆದರೆ ರಾಜ್ಯದಲ್ಲಿ ರೈತನಿಗೆ ಕಟಾವು ಸಾಗಾಣಿಕೆ ವೆಚ್ಚವನ್ನು ಕಳೆದು ರೈತರಿಗೆ ಕೇವಲ 1500ಮಾತ್ರ ಉಳಿಯುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಹಾಡ್ಯ ರವಿ, ಕುರಬೂರು ಸಿದ್ದೇಶ್, ಪಟೇಲ್ ಶಿವಮೂರ್ತಿ, ಮೂಕಹಳ್ಳಿ ಮಹದೇವಸ್ವಾಮಿ, ಹಾಲಿನ ನಾಗರಾಜ್, ಉಡಿಗಾಲ ಗ್ರಾಮ ಘಟಕದ ಮಂಜುನಾಥ್, ಗುರು, ಮಲ್ಲಪ್ಪ, ರೇವಣ್ಣ, ಮಹದೇವಸ್ವಾಮಿ, ಮಹಾದೇವಸ್ವಾಮಿ, ರಾಜು, ಸುಧಾಕರ್, ಶಿವು, ಮಲಿಯೂರು ಘಟಕದ ಬಸವರಾಜಪ್ಪ, ಹರ್ಷಕುಮಾರ್, ಕಾಳಪ್ಪ, ನಂಜುಂಡ ನಾಯಕ, ಮಲ್ಲೇಗೌಡ, ಮಂಜುನಾಥ, ಮಾದಪ್ಪ, ಕನಕ ಹಳ್ಳಿ ಬಸವಣ್ಣ, ಕಿರಗಸೂರು ಶಂಕರ್, ಪ್ರಸಾದ್ ನಾಯಕ, ಚುಂಚರಾಯನ ಹುಂಡಿ ಸಿದ್ದರಾಮಯ್ಯ, ನಂಜುಂಡಸ್ವಾಮಿ, ರಾಜಣ್ಣ, ಮಾರ್ಬಳ್ಳಿ ನೀಲಕಂಠಪ್ಪ ಇನ್ನು ಮುಂತಾದವರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!