Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪಾನ್ ಕಾರ್ಡ್ ಅಪ್ ಡೇಟ್ ನೆಪದಲ್ಲಿ ಆನ್‌ಲೈನ್ ವಂಚನೆ

ಮೈಸೂರು: ವ್ಯಕ್ತಿಯೊಬ್ಬರಿಗೆ ಪಾನ್ ಕಾರ್ಡ್ ಅಪ್ಡೇಟ್ ನೆಪದಲ್ಲಿ ೩.೨೧ ಲಕ್ಷ ರೂ. ವಂಚಿಸಲಾಗಿದೆ.

ಬೋಗಾದಿ ಎರಡನೇ ನಿವಾಸಿ ಡಾ.ಆರ್.ಎಲ್. ಚಿಲಕವಾಡ್ ಹಣ ಕಳೆದುಕೊಂಡವರು. ಪಾನ್ ಕಾರ್ಡ್ ಅಪ್ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿ, ಅದನ್ನು ಒತ್ತಿದ ವೇಳೆ ಬ್ಯಾಂಕ್ ಖಾತೆಯಿಂದ ೩.೨೧ ಲಕ್ಷ ರೂ. ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಭಾನುವಾರ ಸಂಜೆ ವೇಳೆ ಕಳುಹಿಸಿದ ಲಿಂಕ್ ಒತ್ತಿದ ವೇಳೆ ಎಸ್‌ಬಿಐ ಬ್ಯಾಂಕ್ ಯೋನೋ ಆ್ಯಪ್‌ನಲ್ಲಿ ಪಾಸ್ ವರ್ಡ್ ಹಂಚಿಕೊಂಡಿದ್ದು, ನಂತರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಮಹಿಳೆಗೆ ವಂಚನೆ

ಮೈಸೂರು: ಮನೆಯನ್ನು ಲೀಸ್ ಹಾಕಿಕೊಡುವುದಾಗಿ ಇಲ್ಲಿನ ಗೌಸಿಯಾ ನಗರದ ಮಹಿಳೆಯೊಬ್ಬರಿಗೆ ವಂಚನೆ ಎಸಗಿದ್ದು, ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಯಲಹಂಕದ ಮೂವರು ವ್ಯಕ್ತಿಗಳು ದುಡ್ಡು ತೆಗೆದುಕೊಂಡು, ಹಿಂತಿರುಗಿಸಿಲ್ಲ. ಹಣ ಕೇಳಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ