Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆ ಮರು ಜಾರಿ

ಮೈಸೂರು : .(ಕರ್ನಾಟಕ ವಾರ್ತೆ):- ೨೦೨೨-೨೩ ಸಾಲಿಗೆ ಸಹಕಾರಿಗಳಿಗಾಗಿ yಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣ ಯೋಜನೆಯನ್ನು  ರಾಜ್ಯದಲ್ಲಿ ಮರು ಜಾರಿಗೊಳಿಸಿ ಆದೇಶಿಸಿರುತ್ತದೆ. ಈ ಯೋಜನೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಮಾರ್ಗಸೂಚಿಯಲ್ಲಿ ತಿಸಿರುವಂತೆ ಸದರಿ ಯೋಜನೆಯಡಿ  ೧೬೫೦ ಖಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆಗಳನ್ನು ಒಳಗೊಂಡಂತೆ ಚಿಕಿತ್ಸೆ ನೀಡಲಾಗುತ್ತದೆ. ಈ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ನೊಂದಾಯಿಸಿದ ನೆಟ್‌ವರ್ಕ್ ಆಸ್ಪತ್ರೆಗಳನ್ನೇ ಮುಂದುವರೆಸಲಾಗಿರುತ್ತದೆ.
ಮೈಸೂರು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ೦೪ ಸದಸ್ಯರ ಕುಟುಂಬದ ನಗರ ಪ್ರದೇಶಕ್ಕೆ ರೂ.೧೦೦೦/- ಗಳ ವಂತಿಗೆ ಮತ್ತು ಗ್ರಾಮೀಣ/ ಸ್ವಸಹಾಯ ಗುಂಪುಗಳಿಗೆ ರೂ.೫೦೦/- ಗಳ ವಂತಿಗೆಯನ್ನು ಪಾವತಿಸುವುದು, ಪ್ರತಿ ಹೆಚ್ಚುವರಿ ಸದಸ್ಯರಿಗೆ ಶೇ.೨೦ ಅಂದರೆ ರೂ.೧೦೦/- ಗಳನ್ನು ಪಾವತಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ. ಸಹಕಾರಿಗಳು ಸಂಘಕ್ಕೆ ಭೇಟಿ ನೀಡಿ ತಮ್ಮ ಕುಟುಂಬದ ಸದಸ್ಯರ ಆಧಾರ ಕಾರ್ಡ್, ಪಡಿತರ ಕಾರ್ಡು ಮತ್ತು ಭಾವಚಿತ್ರಗಳನ್ನು ಕಾರ್ಯದರ್ಶಿಗಳಿಗೆ  ನೀಡಿ ನೊಂದಣಿ ಮಾಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೧-೨೫೨೧೯೫೬ ಮತ್ತು ೦೮೨೧-೨೪೪೩೩೨೧ ನ್ನು ಸಂಪರ್ಕಿಸಿ ಎಂದು ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಆರ್.ವಿಜಯ್‌ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ