Mysore
16
few clouds

Social Media

ಬುಧವಾರ, 07 ಜನವರಿ 2026
Light
Dark

ಚಾಮಶೆಟ್ಟಿ ಅವರ 4 ಕೃತಿಗಳ ಲೋಕಾರ್ಪಣೆ

ಆಧ್ಯಾತ್ಮಿಕ ಲೋಕ ಕ್ರೋಢಿಕರಿಸುವ ಲೋಕ, ದೂರಿಕರಿಸುವ ಲೋಕವಲ್ಲ: ಪ್ರೊ.ಮೊರಬದ ಮಲ್ಲಿಕಾರ್ಜುನ

ಮೈಸೂರು: ಆಧ್ಯಾತ್ಮಿಕ ಲೋಕ ಕ್ರೋಢಿಕರಿಸುವ ಲೋಕ, ದೂರಿಕರಿಸುವ ಲೋಕವಲ್ಲ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ರಂಗಾಯಣ, ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದಲ್ಲಿ ನಗರದ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಿ.ಚಾಮಶೆಟ್ಟಿ ರಚನೆಯ ‘ನಾಟಕ ಚಕ್ರ’, ‘ಹನುಮನ ಸೀತಾನ್ವೇಷಣೆ ಮತ್ತು ಸಂತ ರವಿದಾಸರು’, ‘ಸಮನ್ವಿತ’, ‘ತ್ರಿವರ್ಣ ಕಾವ್ಯ ಸಂಕಲನ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕತೆಗೆ ಯಾವುದೇ ಗಡಿ, ಗೆರೆಗಳು ಇಲ್ಲ. ಚಾಮಶೆಟ್ಟಿ ಅವರ ಕೃತಿಗಳು ಪ್ರತಿಯೊಬ್ಬರನ್ನು ಆಧ್ಯಾತ್ಮಿಕತೆ ಕಡೆಗೆ ಸೆಳೆಯುವಂತೆ ಮಾಡುತ್ತವೆ. ಇಂದಿನ ಹಲವು ತಲ್ಲಣಗಳಿಂದ ಹೊರ ಬರಲು ಈ ಕೃತಿಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗ ಕಲಾವಿದ ಎಲ್.ಮಲ್ಲಶೆಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕ ಡಿ.ಎನ್.ಲೋಕಪ್ಪ, ಹಿರಿಯ ರಂಗಕರ್ಮಿ ಡಾ.ಎಚ್.ಎ.ಪಾರ್ಶ್ವನಾಥ್, ಕವಯತ್ರಿ ಎನ್.ಕೆರೋಡಿ ಲೋಲಾಕ್ಷಿ ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!