Mysore
27
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ

ಮೆಲ್ಬೋರ್ನ್​(ಆಸ್ಟ್ರೇಲಿಯಾ)  ಟಿ 20ವಿಶ್ವಕಪ್‌  2022 ಇಂಡಿಯಾ vs  ಜಿಂಬಾಂಬ್ಬೆ  : ಟಿ20 ವಿಶ್ವಕಪ್ 2022ರ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ  ವಿರುದ್ಧ ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಗ್ರೂಪ್ 2ರ ಪಟ್ಟಿಯಲ್ಲಿ ಅಗ್ರಸ್ಥಾನದಿಮದ ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ.

ಟಿ20 ವಿಶ್ವಕಪ್ 2022  ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ  ವಿರುದ್ಧ ಭರ್ಜರಿಯಾಗಿ ಗೆದ್ದಿದೆ. ಮೂಲಕ ಗ್ರೂಪ್ 2 ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಸೆಮೀಸ್ಗೆ ಎಂಟ್ರಿ ಕೊಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡವು 17.2 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 115 ರನ್ ಗೆ ಕುಸಿತಕಂಡಿತು. ಮೂಲಕ ಭಾರತ 71 ರನ್ ಗಳಿಂದ ಜಯ ದಾಖಲಿಸಿತು. ಇದರಿಂದ ಭಾರತ ಗ್ರ್ಯಾಂಡ್ಆಗಿ ಸೆಮಿ ಫೈನಲ್ಗೆ ಎಂಟ್ರಿ ನೀಡಿದೆ. ಇತ್ತ ಜಿಂಬಾಬ್ವೆ ಪರ ಕೇವಲ ಸಿಕಂಧರ್ ರಾಜಾ 34 ರನ್ ಮತ್ತು ರಾಯನ್ 35 ರನ್ ಗಳಿಸಿದರು.

ಇನ್ನು, ಜಿಂಬಾಬ್ವೆ ಆಟಗಾರರಿಗೆ ಯಾವುದೇ ಹಂತದಲ್ಲಿಯೂ ಟಾರ್ಗೆಟ್​ ಕಡೆ ಮುನ್ನುಗ್ಗಲು ಭಾರತದ ಬೌಲರ್​ಗಳು ಅವಕಾಶವನ್ನೇ ನೀಡಲಿಲ್ಲ. ಭಾರತದ ಪರ ಅಶ್ವಿನ್​ 3 ವಿಕೆಟ ಪಡೆದರೆ, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖರಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ