Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪಿ.ರಾಜು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆ

ಮೈಸೂರು : ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಇಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ (ರಿ) ವತಿಯಿಂದ ರಾಜ್ಯಾಧ್ಯಕ್ಷರಾದ ಪಿ.ರಾಜು ರವರ ಅಧ್ಯಕ್ಷತೆಯಲ್ಲಿ  ರಾಜ್ಯ ಕಾರ್ಯಕಾರಿಣಿ ಸಭೆಯು ಇಂದು ನಡೆಯಿತು.
ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರು ಪದಾಧಿಕಾರಿಗಳಿಗೆ ನೈಜ ಕಟ್ಟಡ ಕಾರ್ಮಿಕರು ನಮ್ಮ ಹೋರಾಟದ ಫಲವಾಗಿ ಲಭಿಸಿರುವ ಸವಲತ್ತುಗಳನ್ನು ಪಡೆಯಲು ಮಾರ್ಗದರ್ಶನ ಮಾಡಿ ಈ ಸವಲತ್ತುಗಳು ನೈಜ ಕಟ್ಟಡ ಕಾರ್ಮಿಕರು ಅವರ ಕುಟುಂಬ ಪಡೆಯಲು ನಮ್ಮ ಸಂಘಟನೆ ಉಚಿತ ಸೇವೆ ಮಾನದಂಡ ಇರಿಸಿಕೊಂಡು ಶ್ರಮಿಸುವ ಕಾರ್ಯಕ್ಕೆ ಭಾಗವಹಿಸಿದ್ದ ಸಂಘಟನೆಯ ಎಲ್ಲಾ ರೂವಾರಿಗಳಲ್ಲಿ ಮನವಿಮಾಡಲಾಯಿತು.

ಕಟ್ಟಡ ಕಾರ್ಮಿಕರು ಸವಲತ್ತುಗಳನ್ನು ಪಡೆಯಲು ಮಧ್ಯವರ್ತಿಗಳ ಅಶ್ರಯಪಡೆದು ಶೋಷಣೆಗೆ ಒಳಪಡುವುದು ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ನಮ್ಮ ಸಂಘಟನೆ ಜಿಲ್ಲಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಎರಡು ಘಂಟೆ ಸಮಯ ಶ್ರಮಿಕ ಕಟ್ಟಡಕಾರ್ಮಿಕರ ಸೇವೆಗೆ ಮೀಸಲಿಟ್ಟು ಅವರನ್ನು ಮಧ್ಯವರ್ತಿಗಳ ಶೋಷಣೆಯಿಂದ ರಕ್ಷಿಸಿ ನೇರವಾಗಲು ಕರೆನೀಡಲಾಯಿತು.ಎಲ್ಲಾ ನೊಂದಾಯಿತ ಕಟ್ಟಡ ಕಾರ್ಮಿಕರು ಎಲ್ಲಾ ಜಿಲ್ಲಾ ತಾಲೂಕು ಅಧ್ಯಕ್ಷ ಪದಾಧಿಕಾರಿಗಳನ್ನು ಸಂಪರ್ಕಿಸಿ 100 ನೀಡಿ ಅಜೀವ ಸದಸ್ಯತ್ವ ನಮ್ಮ ಸಂಘದಲ್ಲಿ ಪಡೆದು ಮಧ್ಯವರ್ತಿಗಳ ವಂಚನೆಗೊಳಗಾಗದೆ ನಮ್ಮ ಸಂಘದ ಉಚಿತ ಸೇವೆಯನ್ನು ಬಳಸಿಕೊಳ್ಳಲು ಈ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತಿರ್ಮಾನಿಸಿ ಕಟ್ಟಡ ಕಾರ್ಮಿಕರಲ್ಲಿ ಮನವಿಮಾಡಲು ನಿರ್ಣಯಿಸಲಾಯಿತು ಹಾಗೂ ಎಲ್ಲಾ ಜಿಲ್ಲಾ, ತಾಲೂಕು ಮಟ್ಟದಲ್ಲಿ ನಮ್ಮ ಸಂಘಟನೆ ನಾಮಫಲಕ ಅಳವಡಿಸಿ ಉಚಿತ ಸೇವೆ ಎಂಬುದನ್ನು ಮನವರಿಕೆ ಮಾಡುವುದರ ಜೊತೆಯಲ್ಲಿ ಕಟ್ಟಡ ಕಾರ್ಮಿಕರ ಸಮ್ಮೀಲನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ಒಮ್ಮತದಿಂದ ನಿರ್ಣಯವನ್ನು ಸಹ ಅಂಗಿಕರಿಸಲಾಯಿತು.

ಈ ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಾಕ್ಷ ಕಾಂತರಾಜು, ಚಾಮರಾಜನಗರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ನಾಗರಾಜ್, ಹಾವೇರಿ ಜಿಲ್ಲಾಧ್ಯಕ್ಷ ರಮೇಶ್, ಬಿಜಾಪುರ ಜಿಲ್ಲಾಧ್ಯಕ್ಷ ಸುರೇಶ್, ಕೊಡಗು ಜಿಲ್ಲಾಧ್ಯಕ್ಷ ವಿರೇಂದ್ರ, ಹಾಸನ ಜಿಲ್ಲಾಧ್ಯಕ್ಷ ಲೋಕೇಶ್ ಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಸಂತೋಷ್, ಬಳ್ಳಾರಿ ಜಿಲ್ಲಾಧ್ಯಕ್ಷ ಅಂಜಿನೇಯಾ,ಗದಗ ಜಿಲ್ಲಾಧ್ಯಕ್ಷ ರಾಮಪ್ಪ, ಬೆಂಗಳೂರು ಜಿಲ್ಲಾಧ್ಯಕ್ಷ ಮದಿಅಳಗನ್,ಬೆಳಗಾವಿ ಜಿಲ್ಲಾಧ್ಯಕ್ಷ ಸುರೇಶ್ ಸಮನಿ, ದಾವಣಗೆರೆ ಜಿಲ್ಲಾಧ್ಯಕ್ಷ ಬಸವರಾಜು, ರಾಜ್ಯ ಉಪಾಧ್ಯಕ್ಷ ವೇಣುಗೋಪಾಲ್,ರಾಜ್ಯ ಪ್ರಧಾನ ಕಾರ್ಯದರ್ಶಿ ಕಗ ಶಿವಕುಮಾರ್, ರಾಜ್ಯ ಸಂಚಾಲಕ ಸಿದ್ದಪ್ಪ,ರಾಜ್ಯ ನಿರ್ಥೇಶಕ ಪುಟ್ಟಮಾದಯ್ಯ,ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಚಿತ್ರದುರ್ಗ ನಗರಧ್ಯಕ್ಷರು ಚಂದ್ರು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಾಂತಕುಮಾರ್ ಎನ್ ಆರ್ ಕ್ಷೇತ್ರದ ಅಧ್ಯಕ್ಷ ಯೂಸಫ್,ಚಾಮರಾಜ ಕ್ಷೇತ್ರ ಅಧ್ಯಕ್ಷ ಚಂದ್ರು,ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಣೇಶ್ ಮೂರ್ತಿ, ಪತ್ರಿಕಾ ಕಾರ್ಯಧರ್ಶಿ ಸುರೇಶ್, ಅಂಕಣ್ಣ,ಸಿದ್ದಪಾಜೀ,ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡ ಸ್ವಾಮಿ, ನಂಜನಗೂಡು ತಾಲೂಕು ಅಧ್ಯಕ್ಷ ರಾಜಶೇಖರ್ ಸೇರಿದಂತೆ ಇತರೆ ನಮ್ಮ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ