Mysore
29
few clouds

Social Media

ಗುರುವಾರ, 15 ಜನವರಿ 2026
Light
Dark

ಅಕ್ರಮ ಎಂ-ಸ್ಯಾಂಡ್ ಘಟಕದ ಮೇಲೆ ಅಧಿಕಾರಿಗಳ ದಾಳಿ

ಮೈಸೂರು :  ಮೈಸೂರು ಲಾರಿ ಮತ್ತು ಟಿಪ್ಪರ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ (ರಿ.) ದವರ ಸಹಕಾರದ ಮೇರೆಗೆ ನಗರ ವರ್ತುಲ ರಸ್ತೆ, ಯರಗನಹಳ್ಳಿ ವ್ಯಾಪ್ತಿಯ ಮೆಟ್ರೋ ಎಂ-ಸ್ಯಾಂಡ್ ಘಟಕದಲ್ಲಿ ಅಕ್ರಮವಾಗಿ ಎಂ-ಸ್ಯಾಂಡ್, ಜೆಲ್ಲಿ ದಾಸ್ತಾನು ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ ಎಂ-ಸ್ಯಾಂಡ್, ಜೆಲ್ಲಿ ಉಪಖನಿಜವನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯ ಸಮಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ  ರಶ್ಮಿ, ಭೂ ವಿಜ್ಞಾನಿಗಳಾದ ರಾಮಲಿಂಗಯ್ಯ, ಅಮೃತ, ಗಿರೀಶ್, ಜೀವನ್ ಹಾಗೂ ನಂದೀಶ್ ಹಾಜರಿದ್ದರು..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!