Mysore
22
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ಪುನೀತ್‌ ರಾಜ್‌ಕುಮಾರ್‌ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ : ಸಿ.ಎನ್. ಮಂಜೇಗೌಡ

ಮೈಸೂರು: ಮಹಾನಾಯಕರು, ಮಹಾಪುರುಷರು ಹಾಗೂ ಕಲಾವಿದರಿಗೆ ಸಾವಿಲ್ಲ.
ಅವರು ನಮ್ಮೊಂದಿಗೆ ಸದಾಕಾಲ ಜೀವಂತವಾಗಿ ಇರುತಾರೆ. ಅದೇ ರೀತಿ ಪುನೀತ್‌ರಾಜ್
ಕುಮಾರ್ ಸಹ ಮರೆಯಲಾಗದ ಮಹಾಪುರುಷರಾಗಿ ಜನಮಾನಸದಲ್ಲಿ
ಅಜರಾಮರರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ವಿನಾಯಕ ಗೆಳೆಯರ ಬಳಗ ಹಾಗೂ
ಸಿದ್ದೇಗೌಡರ ಅಭಿಮಾನಿ ಬಳಗದ ವತಿಯಿಂದ ನಡೆದ ಪುನೀತ ಪರ್ವ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿದ ಅವರು, ಪುನೀತ್‌ರಾಜ್  ಕುಮಾರ್ ಅವರ ಅಪ್ಪಟ ಅಭಿವಾನಿ, ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ಜನರ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಪುನೀತ್‌ರಾಜ್‌ಕುಮಾರ್ ಅವರು ಸಹ ತಂದೆಯಂತೆ
ಉತ್ತಮ ಕಲಾವಿದರಾಗಿ ಈ ನಾಡಿಗೆ ಸಂದೇಶ ಕೊಡುವಂತಹ ಸಿನಿಮಾಗಳಲ್ಲಿ ಅಭಿನಯಿಸಿ ರಾಜ್ಯ,
ರಾಷ್ಟ್ರ ಪ್ರಶಸ್ತಿ ಗಳಿಸಿ ಎಲೆಮರೆಯ ಕಾಯಿಯಂತೆ ಸಾಮಾಜಿಕ ಸೇವೆ ಮಾಡುತ್ತ ಕಿರಿಯ ವಯಸ್ಸಿನಲ್ಲಿಯೇ
ಅಗಲಿರುವುದು ನಮ್ಮನ್ನು ಕಾಡುತ್ತಿದೆ. ಪುನೀತ್‌ರಾಜ್‌ಕುಮಾರ್ ಮತ್ತೊಮ್ಮೆ ಈ
ಭೂಮಿ ಮೇಲೆ ಹುಟ್ಟಿಬರಲಿ ಎಂದರು.

ಸಮಾರಂಭದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಕೆಂಪನಾಯಕ
ಶ್ರೀರಾಂಪುರ ರಮೇಶ್, ಸೋಮಣ್ಣ, ನಾಗೇಶ್, ನೂರಾರು ಅಭಿಮಾನಿಗಳು
ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!