Mysore
28
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಲಿತರು ಹಿಂದುಳಿದವರು ಸಬಲರಾಗದಿದ್ದರೆ ದೇಶ ಪ್ರಗತಿ ಕಾಣಲ್ಲ: ಶಾಸಕ ಎನ್.ಮಹೇಶ್

ಮೈಸೂರು : ಗಾಂಧಿನಗರದ ಚಿಕ್ಕಗರಡಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಧನಶಕ್ತಿ ಕೋ ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎನ್‌  ಮಹೇಶ್  ಅವರು ಸಹಕಾರ ಕ್ಷೇತ್ರದಲ್ಲಿ ದಲಿತರು,ಹಿಂದುಳಿದ ವರ್ಗಗಳ ಜನರು ಸಕ್ರಿಯವಾಗಿ ಭಾಗಿಯಾದರೆ ಆರ್ಥಿಕವಾಗಿ ಸಬಲರಾಗಲು ನೆರವಾಗಲಿದೆ. ಸಮಾಜದ ಮನಸ್ಥಿತಿ, ಯುವಕರ ಮನಸ್ಥಿತಿ ಡಾ.ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ಇಲ್ಲದ ಬದುಕು,ವ್ಯಕ್ತಿ ಜೀವಂತ ಶವ ಇದ್ದಾಗೆ. ಬರೀ‌ ಭಾಷಣ,ಸ್ಲೋಗನ್ ನಿಂದ ಸಾಧ್ಯವಿಲ್ಲ. ‌ಸ್ವಾಭಿಮಾನಕ್ಕೆ ಶಕ್ತಿ ಅರ್ಥ ಬರಬೇಕಾದರೆ ಆರ್ಥಿಕ ಶಕ್ತಿ ಬರಬೇಕು. ತನ್ನ ಊಟ‌ಬಟ್ಟೆ,ಮನೆ,ಮಕ್ಕಳ ಶಿಕ್ಷಣ, ಹಬ್ಬ ಹರಿದಿನವನ್ನು ನಿಭಾಯಿಸುವ ಶಕ್ತಿ ಇದ್ದರೆ ಆತ ಸ್ವಾವಲಂಬನೆ ಆಗಬೇಕು. ಅಕ್ಕಿ ಕೊಟ್ಟಿದ್ದು ಪರಾವಲಂಬಿ ಎನ್ನುತ್ತೇನೆ. ಆದರೆ ಅದಕ್ಕೆ ತಕ್ಕಂತೆ
ಮನೆ,ಊಟ ಕೊಡಿ ಎನ್ನುವ ಸ್ಥಿತಿ ಬಂದಿರುವುದು ಪರಾವಲಂಬಿ. ‌ಸ್ವಾವಲಂಬನೆ.‌ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿದರೆ ದೇಶದ ಪ್ರಗತಿಗೆ ಕಾರಣವಾಗಲಿದೆ. ೧೯೮೦ರ ದಶಕದಲ್ಲಿ ಹೆಚ್ಚು ಗಳಗಳು,ಹೆಂಚು ಕೊಡುವುದೇ ಆಶ್ರಯ ಯೋಜನೆಯ ಕಲ್ಪನೆಯಾಗಿತ್ತು. ನನ್ನನ್ನು ಸೇರಿದಂತೆ ಅನೇಕರು ಕೊಠಡಿಯಲ್ಲಿ ‌ಹುಟ್ಟಿಲ್ಲ.ಹಾಲ್‌ನಲ್ಲಿ ಹುಟ್ಟಿಲ್ಲ. ನಿರಂತರ ಪರಾವಲಂಬಿ ಬದುಕಿಗೆ ಒಗ್ಗಿದ್ದೇವೆ. ಅದನ್ನು ಕಳಚಿ ಸ್ವಾವಲಂಬನೆ ಬದುಕಿನ ದಾರಿಯನ್ನು ಕಂಡುಕೊಳ್ಳಲು ಮುಂದಾಗಬೇಕು. ದೇಶದ ನೀತಿಗಳು ಬದಲಾವಣೆ ಆಗುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಸಾಕಷ್ಟು ವ್ಯವಸ್ಥೆ, ಸುಧಾರಣೆ ತರಲಾಗುತ್ತಿದೆ. ಜನರನ್ನು ಮತದಾರರೆಂದು ಪರಿಗಣಿಸದೆ ಒನ್ ನೇಷನ್ ಒನ್ ರೇಷನ್ ಎನ್ನುವ ಹೆಸರಿನಲ್ಲಿ ಗರೀಬ್ ಕಲ್ಯಾಣ್ ಯೋಜನ ಜಾರಿಗೆ ತಂದರು. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಬಡವರ ಸ್ಥಿತಿ ಬದಲಿಸಬೇಕು.‌ ಸ್ವಾಭಿಮಾನ ಕೆಲವೊಮ್ಮೆ ದುರಾಭಿಮಾನಕ್ಮೆ ಕಾರಣವಾಗಲಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎನ್.ಸದಾನಂದ,ನಾಮ ನಿರ್ದೇಶಿತ ನಿರ್ದೇಶಕ ಪ್ರಭಾಕರ್ ಸಿಂಧ್ಯಾ, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ‌ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್, ಸಿಟಿ‌ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ರಾಜೇಶ್, ನಿರ್ದೇಶಕ ಸ್ವಾಮಿ, ಎಸ್ ಸಿ‌ ಮೋರ್ಚಾದ ಪರಮಾನಂದ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ