ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಜಿಲ್ಲೆಯಲ್ಲಿ ವಿಫಲಗೊಂಡ ಪರಿವರ್ತಕಗಳನ್ನು 24ಗಂಟೆಯೊಳಗೆ ಪರಿವರ್ತಕಗಳನ್ನು ಬದಲಾಯಿಸಲು ಉಪ-ವಿಭಾಗವಾರು ಪರಿವರ್ತಕಗಳ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದೆ. ವ್ಯಾಪ್ತಿಯಲ್ಲಿ ಪರಿವರ್ತಕ ಬದಲಾವಣೆ ಕಾರ್ಯಕ್ಕೆ ನಿಗಮದ ಅಧಿಕಾರಿ, ನೌಕರರು ವಿಫಲಗೊಂಡ ಪರಿವರ್ತಕಗಳನ್ನು ಬದಲಾಯಿಸಲು ವಿಳಂಬ ಮಾಡಿದರೆ ಅಥವಾ ಹಣಕ್ಕೆ ಪೀಡಿಸಿದರೆ ಹತ್ತಿರದ ಕಚೇರಿ ದೂರವಾಣಿಗೆ ಸಂಪರ್ಕಿಸಿ ದೂರು ನೀಡಲು ಕೋರಲಾಗಿದೆ.
ನಗರ ಉಪವಿಭಾಗ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(9448994944), ದುದ್ದ ಉಪವಿಭಾಗ (ದುದ್ದ, ಶಾಂತಿಗ್ರಾಮ, ಹೆರಗು, ಸಾಲಗಾಮೆ, ನಿಟ್ಟೂರು ಶಾಖೆ) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (9448994945) ಅವರನ್ನು ಸಂಪರ್ಕಿಸಲು ಕೋರಲಾಗಿದೆ.





