Mysore
22
overcast clouds

Social Media

ಶನಿವಾರ, 13 ಜೂನ್ 2026
Light
Dark

ಬೇಗೂರು : ಖಾಸಗಿ ಕ್ಲಿನಿಕ್‌ಗಳಿಗೆ ಟಿಎಚ್‌ಒ ದಿಢೀರ್ ಭೇಟಿ

ಗುಂಡ್ಲುಪೇಟೆ: ತಾಲ್ಲೂಕು ವ್ಯಾಪ್ತಿಯ ಬೇಗೂರಿನಲ್ಲಿರುವ ಹಲವು ಖಾಸಗಿ ಕ್ಲಿನಿಕ್‌ಗಳಿಗೆ ಇಂದು ತಾಲ್ಲೂಕು ಆರೋಗ್ಯಾಧಿಕಾರಿ ಗಿರಿದಾಸ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದಲ್ಲಿ ಇರುವ ನಾಲ್ಕು ಕ್ಲಿನಿಕ್ ಗಳಲ್ಲಿ ಒಬ್ಬರು ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿದ್ದಾರೆ ಎಂಬ ವಾಹಿತಿ ಮೇರೆಗೆ ಅಲ್ಲಿಗೆ ತೆರಳಿದಾಗ ಕ್ಲಿನಿಕ್ ಮುಚ್ಚಿದ್ದು ಕಂಡುಬಂದಿತು. ಉಳಿದ ಮೂರು ಕ್ಲಿನಿಕ್‌ಗಳಾದ ಪ್ರಕಾಶ್ ಕ್ಲಿನಿಕ್, ಮಂಗಳ ಕ್ಲಿನಿಕ್, ವಿನಾಯಕ ಕ್ಲಿನಿಕ್‌ಗಳಲ್ಲಿ ಆಯುರ್ವೇದ ವೈದ್ಯರು ಕ್ಲಿನಿಕ್ ನಡೆಸುತ್ತಿದ್ದು, ಅಲೋಪತಿ ಚಿಕಿತ್ಸೆ ನೀಡುತ್ತಿರುವುದನ್ನು ಪರಿಶೀಲನೆ ನಡೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!