Mysore
26
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸ್ಪಿರಿಟ್ ಸಾಗಣೆ ; ಇಬ್ಬರ ಬಂಧನ

ಚಾಮರಾಜನಗರ: ತಾಲ್ಲೂಕಿನ ಪುಣಜನೂರು ಚೆಕ್‌ಪೋಸ್ಟ್ನಲ್ಲಿ ಈರುಳ್ಳಿ ಮೂಟೆಗಳ ನಡುವೆ ಸ್ಪಿರಿಟ್ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಹರಿ ಮತ್ತು ವಿನೋದ್ ಎಂಬುವರನ್ನು ಬಂಧಿಸಿ ೭ ಸಾವಿರ ಲೀಟರ್ ಸ್ಪೀರಿಟ್ ಮತ್ತು ಸಾಗಣೆ ಮಾಡುತ್ತಿದ್ದ ಈಚರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳಕ್ಕೆ ಈರುಳ್ಳಿ ಸಾಗಿಸುವ ನೆಪದಲ್ಲಿ ಮೂಟೆಗಳ ಮಧ್ಯೆ ಸ್ಪಿರಿಟ್ ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ನಗರದ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ಪೇದೆಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಈ ಸಂಬoಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!