Mysore
20
overcast clouds

Social Media

ಮಂಗಳವಾರ, 13 ಜನವರಿ 2026
Light
Dark

BYJU’S ಸಂಸ್ಥೆಯ ರಾಯಭಾರಿಯಾಗಿ ಲಿನೋನೆಲ್‌ ಮೆಸ್ಸಿ ಆಯ್ಕೆ

ನವದೆಹಲಿ : ಖ್ಯಾತ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು BYJU’S ಸಂಸ್ಥೆಯ ರಾಯಭಾರಿಯಾಗಿ ನೇಮಕ ಮಾಡುವ ಮೂಲಕ ಅವರನ್ನು ಗ್ಲೋಬಲ್ ಬ್ರ್ಯಾಂಡ್ ಅಂಬಾಸಡರ್ ಆಗಿ ಆಯ್ಕೆ ಮಾಡಿದೆ.

ಬೈಜೂಸ್‌ ಸಂಸ್ಥೆಯು ಶಿಕ್ಷಣ ಮತ್ತು ತಂತ್ರಜ್ಞಾನದ ಹೆಸರಾದ ಕಂಪನಿಯಾಗಿದ್ದು,ಇದು  ಮೆಸ್ಸಿ ಅವರು ಬೈಜೂಸ್‌ನ ‘ಎಜುಕೇಶನ್ ಫಾರ್ ಆಲ್’ ಯೋಜನೆಯ ಚೊಚ್ಚಲ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

ಅರ್ಜೆಂಟೀನಾದ ಫುಟ್‌ಬಾಲ್ ತಂಡದ ನಾಯಕರಾಗಿರುವ ಮೆಸ್ಸಿ, ಸಮಾನ ಶಿಕ್ಷಣದ ಕಾರಣವನ್ನು ಉತ್ತೇಜಿಸಲು ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿ ಹೇಳಿಕೊಂಡಿದೆ.ನಮ್ಮ ಜಾಗತಿಕ ರಾಯಭಾರಿಯಾಗಿ ಮೆಸ್ಸಿ ಅವರೊಂದಿಗೆ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ. ಅವರು ತಳಮಟ್ಟದಿಂದ ಬೆಳೆದು ಬಂದವರು. ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಲ್ಲಿ ಒಬ್ಬರಾದವರು. BYJU’s Education For All (EFA) ಪ್ರಸ್ತುತ 5.5 ಮಿಲಿಯನ್ ಮಕ್ಕಳನ್ನು ಸಶಕ್ತಗೊಳಿಸುತ್ತಿದೆ. ಮೆಸ್ಸಿಗಿಂತ ಹೆಚ್ಚು ಮಾನವ ಶಕ್ತಿಯನ್ನು ಯಾರೂ ಪ್ರತಿನಿಧಿಸುವುದಿಲ್ಲ ಎಂದು ಸಹ – ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!