Mysore
34
few clouds

Social Media

ಭಾನುವಾರ, 10 ಮೇ 2026
Light
Dark

ನಮ್ಮ ವಾತಾವರಣದಲ್ಲೇನಿದು ರಣ ರಣ?

ದೇಶದಲ್ಲಾದ ಬೆಳೆ ಹಾನಿಯ ಪೈಕಿ ಶೇ.೫೦ರಷ್ಟು ಕರ್ನಾಟಕ ರಾಜ್ಯವೊಂದರಲ್ಲೇ ಆಗಿದೆ.
ರಾಜ್ಯವು ಸತತ ೮೨ ದಿನಗಳ ಹವಾಮಾನ ವೈಪರೀತ್ಯವನ್ನು ಎದುರಿಸಿದೆ!

ಆರ್ಥಿಕ ಅಸ್ಥಿರತೆ, ಸಾಮಾಜಿಕ ಕ್ಷೋಭೆಗಳನ್ನು ಕಂಡ ೨೦೨೨ನೇ ಸಾಲಿನಲ್ಲಿ ಪರಿಸರದಲ್ಲೂ ಅಲ್ಲೋಲ ಕಲ್ಲೋಲವಾಗಿದೆ. ನಮ್ಮ ವಾತಾವರಣದಲ್ಲೂ ಹಿಂದೆಂದೂ ಕಂಡು ಕೇಳರಿಯದಂತಹ ಅಸ್ಥಿರತೆ ಮತ್ತು ಕ್ಷೋಭೆ ಕಂಡು ಬಂದಿದೆ. ೨೦೨೨ನೇ ಸಾಲಿನ ಮೊದಲ ಒಂಭತ್ತು ತಿಂಗಳಲ್ಲೇ ಶೇ.೮೯ರಷ್ಟು ಹವಾಮಾನ ವೈಪರಿತ್ಯಗಳು ದಾಖಲಾಗಿವೆ. ಪರಿಸರ ವೈಪರಿತ್ಯಗಳಿಂದಾಗುವ ಹಾನಿ ವ್ಯಾಪಕ. ಆರ್ಥಿಕ ಹಾನಿಯ ಜತೆಗೆ ಸಾಮಾಜಿಕ ಅಸ್ಥಿರತೆಗೂ ಕಾರಣವಾಗುತ್ತದೆ. ಜನ ಜಾನುವಾರುಗಳ ಜೀವಹರಣವಾಗುತ್ತದೆ. ಎದೆಯೆತ್ತರಕ್ಕೆ ಬೆಳೆದ ಬೆಳೆಗಳು ಕಣ್ಣೆದುರಿಗೆ ನಾಶವಾಗುತ್ತವೆ. ಎಷ್ಟೋ ವರ್ಷಗಳ ಕನಸುಗಳಿಂದ ರೂಪುಗೊಂಡು ಕಟ್ಟಿದ ಮನೆಗಳು ಕುಸಿಯುತ್ತವೆ. ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತಾಗುತ್ತದೆ.

ಈ ವರ್ಷದಲ್ಲಿನ ಮೊದಲ ಒಂಭತ್ತು ತಿಂಗಳುಗಳ ಹಾನಿಯನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ತನ್ನ ‘ಭಾರತ ೨೦೨೨: ವೈಪರಿತ್ಯ ಹವಾಮಾನ ಘಟನೆಗಳ ಮೌಲ್ಯಮಾಪನ’ ವರದಿಯಲ್ಲಿ ದಾಖಲಿಸಿದೆ.


ಹವಾಮಾನ ವೈಪರಿತ್ಯ ಘಟನೆಗಳು ಯಾವುವು?

ಭಾರತೀಯ ಹವಾಮಾನ ಇಲಾಖೆಯು ವರ್ಗೀಕರಿಸಿರುವಂತೆ ಕೆಳಕಂಡವು ವೈಫರಿತ್ಯ ಘಟನೆಗಳಾಗಿವೆ :
ಬಿಸಿಗಾಳಿಯ ಅಲೆಗಳು, ಹಿಮಪಾತ, ಧೂಳು ಮತ್ತು ಮರಳಿನ ಬಿರುಗಾಳಿಗಳು, ಆಲಿಕಲ್ಲುಗಳು, ಬಿರುಗಾಳಿಗಳು, ಚಂಡಮಾರುತಗಳು, ಶೀತ ಅಲೆಗಳು, ಮಿಂಚು ಮತ್ತು ಗುಡುಗುಗಳು, ಭಾರೀ ಮಳೆ ಮತ್ತು ಭೂಕುಸಿತಗಳು.


ವರದಿಯಲ್ಲೇನಿದೆ?

ವಾತಾವರಣ ಬದಲಾವಣೆಯು ಪ್ರಪಂಚದಾದ್ಯಂತ ತೀವ್ರವಾದ ಹವಾಮಾನ ವೈಪರಿತ್ಯ ಘಟನೆಗಳ ಆವರ್ತನ ಮತ್ತು ತೀವ್ರತೆಯನ್ನು ಉಲ್ಬಣಗೊಳಿಸುತ್ತಿದೆ ಎಂಬುದು ವೈಜ್ಞಾನಿಕ ಒಮ್ಮತವಾಗಿದೆ.

-ಈ ವರ್ಷ ಜನವರಿ ೧- ಸೆಪ್ಟೆಂಬರ್ ೩೦ ರ ನಡುವಿನ ಹವಾಮಾನ ವೈಪರೀತ್ಯಗಳು ದೇಶದಲ್ಲಿ ೨,೭೫೫ ಜೀವಗಳನ್ನು ಬಲಿ ಪಡೆದಿವೆ.

– ೧.೮ ಮಿಲಿಯನ್ ಹೆಕ್ಟೇರ್ ಬೆಳೆ ಪ್ರದೇಶವನ್ನು ನಾಶಪಡಿಸಿದೆ.

– ನಾಲ್ಕು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಮತ್ತು ೭೦,೦೦೦ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದೆ.

-ನಷ್ಟ ಮತ್ತು ಹಾನಿಯ ಅಂದಾಜುಗಳ ಪ್ರಗತಿಯಲ್ಲಿದೆ ಎಂದು ಸಂಶೋಧಕರು ಹೇಳುತ್ತಾರೆ.

-ಹೆಚ್ಚಿನ ಸಂಖ್ಯೆಯ ಮಾನವ ಸಾವುಗಳು ಕ್ರಮವಾಗಿ ಹಿಮಾಚಲ ಪ್ರದೇಶದಲ್ಲಿ ಮಧ್ಯಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸಂಭವಿಸಿವೆ.

-ಮಧ್ಯಪ್ರದೇಶವು ಪ್ರತಿ ಎರಡನೇ ದಿನವೂ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ವಿಪತ್ತುಗಳನ್ನು ಎದುರಿಸುತ್ತಿದೆ.

– ಅಸ್ಸಾಂನಲ್ಲಿ ಅತಿ ಹೆಚ್ಚು ಮನೆಗಳು ಹಾನಿಯಾಗಿವೆ ಮತ್ತು ಜಾನುವಾರುಗಳು ಸಾವನ್ನಪ್ಪಿವೆ.

-ದೇಶದಲ್ಲಾದ ಬೆಳೆ ಹಾನಿಯ ಪೈಕಿ ಶೇ.೫೦ರಷ್ಟು ಕರ್ನಾಟಕ ರಾಜ್ಯವೊಂದರಲ್ಲೇ ಆಗಿದೆ. ಕರ್ನಾಟಕವು ಸತತ
೮೨ ದಿನಗಳ ಹವಾಮಾನ ವೈಪರೀತ್ಯವನ್ನು ಎದುರಿಸಿದೆ.

-ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ನಲ್ಲೂ ಬೆಳೆ ಪ್ರದೇಶಕ್ಕೆ ವ್ಯಾಪಕ ಹಾನಿಯಾಗಿದೆ.


೨೦೨೨ರ ಮಹಾ ವೈಪರಿತ್ಯಗಳು

೨೦೨೨ರ ಮಾರ್ಚ್ ತಿಂಗಳು ಭಾರತದ ಪಾಲಿಗೆ ೧೨೧ ವರ್ಷಗಳಲ್ಲಿ ಅತ್ಯಂತ ಬೆಚ್ಚಗಿನ ತಿಂಗಳಾಗಿತ್ತು.
೧೨೧ ವರ್ಷಗಳಲ್ಲಿ ಮೂರನೇ ಒಣ ಮಾರ್ಚ್ ಆಗಿತ್ತು.

ಏಪ್ರಿಲ್ ತಿಂಗಳು ಭಾರತದ ಮೂರನೇ- ಬೆಚ್ಚಗಿನ ತಿಂಗಳಾಗಿತ್ತು.

ಆಗಸ್ಟ್ ತಿಂಗಳು ೧೧ನೇ ಬೆಚ್ಚಗಿನ ತಿಂಗಳಾಗಿತ್ತು.

ಜನವರಿ ಏಳನೇ-ಆರ್ದ್ರ ತಿಂಗಳಾಗಿತ್ತು.

ಸೆಪ್ಟೆಂಬರ್ ೧೯೦೧ ರಿಂದೀಚೆಗೆ ೮ ನೇ ಅತಿ ಉಷ್ಣತೆಯ ತಿಂಗಳಾಗಿತ್ತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!