ಹನೂರು: ಕಳೆದ 24 ವರ್ಷಗಳಿಂದ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸಿದ ಮಹದೇವ್ ಶೆಟ್ಟಿ ರವರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಮಹದೇವಶೆಟ್ಟಿ ರವರು ಪಟ್ಟಣ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ 24 ವರ್ಷಗಳ ಸತತ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇವರು ಸೇವೆ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮಳೆಯಿಲ್ಲದೆ ತೀವ್ರ ಬರಗಾಲ ಬಂದ ಸಂದರ್ಭದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ .ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯ,ಇದಲ್ಲದೆ ಪಟ್ಟಣ ಅಭಿವೃದ್ಧಿಯಾಗಬೇಕಾದರೆ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ನೀರುಗಂಟಿಗಳು ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಮುಖ್ಯಾಧಿಕಾರಿ ಮೂರ್ತಿ ಮಾತನಾಡಿ ಮಹದೇವಶೆಟ್ಟಿ ರವರು ನಿವೃತ್ತಿ ಜೀವನ ಸುಖಕರವಾಗಿರಲಿ.ಅವರು ದಿನಗೂಲಿ ನೌಕರರಾಗಿದ್ದರು ಸಹ ಕಾಯಂ ನೌಕರರಂತೆ ಕರ್ತವ್ಯ ನಿರ್ವಹಿಸಿದ್ದಾರೆ.ಅವರಿಗೆ ಕೊಟ್ಟಂತಹ ನೀರುಗಂಟಿ ,ಬಸ್ ನಿಲ್ದಾಣದ ಸುಂಕ ವಸೂಲಾತಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ’ ಸದಸ್ಯರಾದ ಸುದೇಶ್,ಮಹೇಶ್ ನಾಯ್ಕ,ಪುಟ್ಟರಾಜು ಆರೋಗ್ಯ ನಿರೀಕ್ಷಕ ಬಾಲಸುಬ್ರಹ್ಮಣ್ಯ ಸಿಬ್ಬಂದಿಗಳಾದ ದೇವಿಕಾ ಮಂಜುನಾಥ, ಪ್ರತಾಪ್,ಮದನ್ ಶರತ್ ,ನಾಗೇಂದ್ರ, ರಾಕೇಶ್ ಸುರೇಶ್, ರಾಜೇಂದ್ರ,ಶ್ರೀನಿವಾಸ್ ಸುಷ್ಮಾ ಸೇರಿದಂತೆ ನೀರುಗಂಟಿಗಳು ಹಾಜರಿದ್ದರು





