Mysore
37
scattered clouds

Social Media

ಶನಿವಾರ, 02 ಮೇ 2026
Light
Dark

ಹನೂರು ತಾಲ್ಲೂಕಿನ ದಂಟಳ್ಳಿ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ: ಗ್ರಾಮಸ್ಥರ ಆತಂಕ

ಹನೂರು:ತಾಲ್ಲೂಕಿನ ದಂಟಳ್ಳಿ ದೊಡ್ಡಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಕೌದಳ್ಳಿ ಜಿಲ್ಲಾ ಪಂಚಾಯಿತಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಟಳ್ಳಿ ಹಾಗೂ ಮೇಗಲೂರು ಗ್ರಾಮದ ಮಧ್ಯೆ ಇರುವ ದೊಡ್ಡ ಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

 

ಈ ಕೆರೆಗೆ ಪ್ರತಿದಿನ ಜಾನುವಾರುಗಳು ಹಾಗೂ ಬಟ್ಟೆ ತೊಳೆಯಲು ಗ್ರಾಮಸ್ಥರು ತೆರಳುತ್ತಿದ್ದರು ಆದರೆ ಮೊಸಳೆ ಕಂಡು ಬಂದ ನಂತರ ಕೆರೆಯ ಬಳಿ ಯಾರೊಬ್ಬರು ಹೋಗುತ್ತಿಲ್ಲ. ಕಳೆದ 2 ದಿನಗಳ ಹಿಂದೆ ಕೆರೆಗೆ ನೀರು ಕುಡಿಯಲು ತೆರಳಿದ್ದ 1ದೊಡ್ಡ ನಾಯಿಯನ್ನು ಸಹ ಮೊಸಳೆ ತಿಂದು ಹಾಕಿದೆ .ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ ಆದರೆ ಇದುವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಅವಘಡಗಳು ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!