ಪಬ್ಬಜ ಶಿಬಿರ ಸವಾರೋಪ ಸಮಾರಂಭ ಉದ್ಘಾಟನೆ.
ಮೈಸೂರು: ಸ್ವಾಮಿ ವಿವೇಕಾನಂದರನ್ನು ಕೇವಲ ಹಿಂದೂಧರ್ಮಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ. ವಾಸ್ತವವಾಗಿ ನೋಡಿದರೆ ವಿವೇಕಾನಂದರು ಹಿಂದೂ ಧರ್ಮವನ್ನು ಒಪ್ಪಿಕೊಂಡಿರಲಿಲ್ಲ. ಅವರ ಸಂಪುಟಗಳನ್ನು ಓದಿದಾಗ ಬುದ್ಧರನ್ನು ಅಪಾರವಾಗಿ ಇಷ್ಟಪಡುತ್ತಿದ್ದರು ಎಂದು ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ತಿಳಿಸಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧವಿಹಾರದಲ್ಲಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಮತ್ತು ಭಾರತೀಯ ಬೌದ್ಧ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪಬ್ಬಜ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿವೇಕಾನಂದರು ಹಿಂದೂ ಧರ್ಮವನ್ನು ಟೀಕಿಸಿದಷ್ಟು ಬೇರಾರೂ ಟೀಕಿಸಿಲ್ಲ. ದೀನ-ದಲಿತರನ್ನು ಹಿಂದೂ ಧರ್ಮವು ತುಳಿದಷ್ಟು ಪ್ರಪಂಚದ ಬೇರಾವ ಧರ್ಮಗಳೂ ತುಳಿಯಲಿಲ್ಲ ಎಂದು ಹೇಳಿದರು.
ಇದೇ ವೇಳೆ ವಿಶ್ವಮೈತ್ರಿ ಬುದ್ಧವಿಹಾರದ ಡಾ.ಕಲ್ಯಾಣ ಸಿರಿ ಭಂತೇಜಿ ಅವರು ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕರ್ನಾಟಕ ಬುದ್ಧಧಮ್ಮ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ಮಹೇಂದ್ರ ಮಂಕಾಳೆ, ಬೀದರ್‌ನ ಅಣದೂರು ಬುದ್ಧವಿಹಾರದ ಸಂಘಮಿತ್ರ ಭಂತೇಜಿ, ಸಂಘ ಸೇವಕ ಭಂತೇಜಿ, ಹೋರಾಟಗಾರ ಮಂಟೇಲಿಂಗಯ್ಯ, ಉಪಾಸಕರಾದ ಮನೋಹರ್ ಮೌರ್ಯ ಬಾಬುರಾವ್ ಅಣದೊರೆ, ಅರ್ಜುನ್‌ರಾವ್ ಕೇಸರಿ, ಕರ್ನಾಟಕ ಬುದ್ಧಧಮ್ಮ ಸಮಿತಿ ಸಹ ಕಾರ್ಯದರ್ಶಿ ಎಚ್.ಶಿವರಾಜು, ನಿವೃತ್ತ ಇಂಜಿನಿಯರ್ ಆರ್.ನಟರಾಜು, ವಕೀಲ ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಟಿ.ಎಂ.ನಾಗರಾಜು, ಡಾ.ಜಗದೀಶ್, ಡಾ.ಜಗನ್ನಾಥ್, ಶಾಂತಿ ಮಂಜು, ಉತ್ತಂಬಳ್ಳಿ ನಾಗರಾಜು, ಮಾ ನಾಗಯ್ಯ ಪ್ರೊ.ಅಮೂಲ್ಯ, ಡಾ.ಮಂಜು ಸತ್ತಿಗೆಹುಂಡಿ, ನಿರಂಜನ್, ಮೂರ್ತಿ, ಚನ್ನಪಟ್ಟಣ ಲಕ್ಷ್ಮಣ್, ಸಂಶೋಧಕ ರೂಪೇಶ್, ಸುರೇಶ್ ಕಂದೇಗಾಲ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಂಶೋಧಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





